ರಾಜಕಾರಣಿಗಳ ಮಿಮಿಕ್ರಿ ಮಾಡುತ್ತಿದ್ದ ವ್ಯಕ್ತಿ ಬಂಧನ!

ರಾಜಕಾರಣಿಗಳ ಮಿಮಿಕ್ರಿ ಮಾಡುತ್ತಿದ್ದ ವ್ಯಕ್ತಿ ಬಂಧನ!

ಗಾಂಧಿನಗರ, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ  ರಾಜಕೀಯ ನಾಯಕರ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿಯನ್ನು ರೈಲ್ವೇ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

ಗೊಂಬೆ, ಆಟಿ ವಸ್ತುಗಳ, ವೆನಿಟಿ ಬ್ಯಾಗ್  ವ್ಯಾಪಾರಿ ಅದ್ವೇಶ್ ದುಬೆ ಬಂಧಿತ.  ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲಿನಲ್ಲಿ ವ್ಯಾಪಾರ ಮಾಡುತ್ತಿದ್ದ. ಆದರೆ ಗ್ರಾಹಕರನ್ನು ಮೆಚ್ಚಿಸುವ ಉದ್ದೇಶದಿಂದ ಪ್ರಧಾನಿ ಮೋದಿ, ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ನಾಯಕರ ಮಿಮಿಕ್ರಿ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಗುಜರಾತ್‍ನ ಸೂರತ್ ರೈಲು ನಿಲ್ದಾಣದಲ್ಲಿ ಆರ್ ಪಿಎಫ್ ಪೊಲೀಸರು ಬಂಧಿಸಿದ್ದಾರೆ. ಅದ್ವೇಶ್ ದುಬೆ ಮೂಲತಃ ಉತ್ತರ ಪ್ರದೇಶದ ವಾರಣಾಸಿ ನಿವಾಸಿ. ಅಲ್ಲಿಂದ ಗುಜರಾತ್‍ನ ವಲ್ಸಾದ್‍ಗೆ ವಲಸೆ ಬಂದಿದ್ದಾನೆ. ವಾಪಿ ಹಾಗೂ ಸೂರತ್ ಮಧ್ಯೆ ಸಂಚರಿಸುವ ರೈಲುಗಳಲ್ಲಿ ಗೊಂಬೆ, ಆಟಿಗೆ ಸೇರಿದಂತೆ ಕೆಲವು ವಸ್ತುಗಳನ್ನು ಮಾರಿ ಜೀವನ ನಡೆಸುತ್ತಿದ್ದ ಎಂದು ಆರ್ ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos