ಪೊಲೀಸ್ ಇಲಾಖೆಯಲ್ಲಿ 30 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಪೊಲೀಸ್ ಇಲಾಖೆಯಲ್ಲಿ 30 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಗುಪ್ತಚರ ಇಲಾಖೆಯ 30 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಮರ್‍ ಕುಮಾರ್ ಪಾಂಡೆ ಅವರನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ಗುಪ್ತಚರ ಇಲಾಖೆಯ ಇತರೆ ಕೆಲವು ಅಧಿಕಾರಿಗಳನ್ನು ಕೂಡ ಬದಲಾವಣೆ ಮಾಡಲಾಗಿದೆ.

ರಾಜ್ಯ ಗುಪ್ತಚರ ಇಲಾಖೆಯ ಐಜಿಪಿಯಾಗಿ ಬಿ.ದಯಾನಂದ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಕೆಲವು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ದಾವಣಗೆರೆಯ ಪೂರ್ವ ವಲಯದ ಐಜಿಪಿ ಹುದ್ದೆಗೆ ಅಮ್ರಿತ್‍ಪೌಲ್, ಬೆಂಗಳೂರಿನ ಕೇಂದ್ರ ವಲಯ ಐಜಿಪಿ ಹುದ್ದೆಗೆ ಕೆ.ವಿ.ಶರತ್‍ಚಂದ್ರ ಅವರನ್ನು ವರ್ಗಾಯಿಸಲಾಗಿದೆ.

ದಕ್ಷಿಣ ವಲಯದ ಐಜಿಪಿ ಹುದ್ದೆಗೆ ವಿಪುಲ್‍ಕುಮಾರ್ ಅವರನ್ನು ವರ್ಗಾಯಿಸಿದ್ದು, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.

ಬಳ್ಳಾರಿ ವಲಯದ ಐಜಿಪಿಯಾಗಿ ಎಂ.ನಂಜುಂಡಸ್ವಾಮಿ, ಬೆಂಗಳೂರಿನ ಬಂದಿಖಾನೆ ಐಜಿಪಿಯಾಗಿ ಎಚ್.ಎಸ್.ರೇವಣ್ಣ, ಬೆಳಗಾವಿಯ ಉತ್ತರ ವಲಯದ ಐಜಿಪಿಯಾಗಿ ರಾಘವೇಂದ್ರ ಸುಹಾಸ ಅವರನ್ನು ವರ್ಗಾಯಿಸಲಾಗಿದೆ.

ಬೆಂಗಳೂರಿನ ಗುಪ್ತಚರ ಇಲಾಖೆಯ ಡಿಐಜಿಪಿಯಾಗಿ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಬೆಂಗಳೂರಿನ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಡಿಐಜಿ ಮತ್ತು ಜಂಟಿ ಪೊಲೀಸ್ ಆಯುಕ್ತರಾಗಿ ಟಿ.ಆರ್.ಸುರೇಶ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಮಂಗಳೂರು ನಗರದ ಡಿಐಜಿ ಮತ್ತು ಪೊಲೀಸ್ ಆಯುಕ್ತರಾಗಿ ಸಂದೀಪ್‍ಪಾಟೀಲ್, ಕೆಎಸ್‍ಆರ್‍ಟಿಸಿ ಭದ್ರತೆ ಮತ್ತು ಜಾಗೃತ ವಿಭಾಗದ ನಿರ್ದೇಶಕರಾಗಿ ಡಾ.ಪಿ.ಎಸ್.ಹರ್ಷ, ನಕ್ಸಲ್ ನಿಗ್ರಹಪಡೆಯ ಡಿಐಜಿಪಿಯಾಗಿ ವಿಕಾಸ್‍ಕುಮಾರ್ ವಿಕಾಸ್, ಬೆಳಗಾವಿಯ ಪೊಲೀಸ್ ಆಯುಕ್ತರಾಗಿ ಮತ್ತು ಡಿಐಜಿಪಿಯಾಗಿ ಬಿ.ಎಸ್.ಲೋಕೇಶ್‍ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ.

ಬೆಂಗಳೂರಿನ ನೇಮಕಾತಿ ವಿಭಾಗದ ಡಿಐಜಿಪಿಯಾಗಿ ಪಿ.ರಾಜೇಂದ್ರ ಪ್ರಸಾದ್, ಬೆಂಗಳೂರಿನ ವಿಧಿ-ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ಡಾ.ಚೇತನ್‍ಸಿಂಗ್ ರಾಥೋಡ್, ಬೆಂಗಳೂರು ನಗರದ ಉತ್ತರ ವಲಯ ಡಿಸಿಪಿಯಾಗಿ ಎಲ್.ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಿದೆ.

ಬೆಂಗಳೂರಿನ ಗುಪ್ತಚರ ಇಲಾಖೆ ಎಸ್‍ಪಿಯಾಗಿ ಡಾ.ಎಂ.ಬಿ.ಬೋರಲಿಂಗಯ್ಯ, ಬೆಂಗಳೂರಿನ ಹೋಮ್‍ ಗಾಡ್ರ್ಸ್ ಕಮಾಂಡೆಂಟ್ ಆಗಿ ಅಭಿನವ್ ಖರೆ, ಕಲಬುರಗಿ ಎಸ್‍ಪಿಯಾಗಿ ಲಡಾ ಮಾರ್ಟಿನ್ ಮರ್ಬಾನಿಯಾಂಗ್, ಬೆಂಗಳೂರಿನ ಅಪರಾಧ ವಿಭಾಗದ ಎಐಜಿಪಿಯಾಗಿ ಕಾರ್ತಿಕ್‍ ರೆಡ್ಡಿ ಅವರನ್ನು ವರ್ಗಾಯಿಸಲಾಗಿದೆ.

ಚಿಕ್ಕಬಳ್ಳಾಪುರ ಎಸ್‍ಪಿಯಾಗಿ ಕೆ.ಸಂತೋಷ್‍ಬಾಬು, ಬೆಂಗಳೂರು ನಗರ ದಕ್ಷಿಣ ವಲಯದ ಡಿಸಿಪಿಯಾಗಿ ಇಶಾಪಂಥ್ ಅವರನ್ನು ವರ್ಗಾಯಿಸಲಾಗಿದೆ. ಆದರೆ, ಬೆಂಗಳೂರು ದಕ್ಷಿಣ ವಲಯದ ಡಿಸಿಪಿಯಾಗಿದ್ದ ಕೆ.ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಯಾವುದೇ ಹುದ್ದೆ ನೀಡಿಲ್ಲ.

ಬೆಂಗಳೂರಿನ ಅಪರಾಧ ತನಿಖಾ ವಿಭಾಗದ ಎಸ್‍ಪಿಯಾಗಿ ಧರ್ಮೇಂದ್ರ ಕುಮಾರ್ ಮೀನ, ಉಡುಪಿ ಜಿಲ್ಲಾ ಎಸ್‍ಪಿಯಾಗಿ ನಿಶಾ ಜೇಮ್ಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ವಯರ್‍ಲೆಸ್ ವಿಭಾಗದ ಎಸ್‍ಪಿಯಾಗಿ ಲಕ್ಷ್ಮಣ್ ನಿಂಬರಗಿ, ಯಾದಗಿರಿ ಜಿಲ್ಲೆ ಎಸ್‍ಪಿಯಾಗಿ ಸೋನಾವಾನೆ ಋಷಿಕೇಶ್ ಭಗವಾನ್, ಹುಬ್ಬಳ್ಳಿ-ಧಾರವಾಡ ನಗರದ ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಡಾ.ಎಲ್.ನಾಗೇಶ್ ಅವರನ್ನು ವರ್ಗಾವಣೆ.

ಶಿವಮೊಗ್ಗ ಜಿಲ್ಲಾ ಎಸ್‍ಪಿಯಾಗಿ ಡಾ.ಎಂ.ಅಶ್ವಿನಿ, ಬೆಂಗಳೂರು ಉಪ ಪೊಲೀಸ್ ಆಯುಕ್ತರಾಗಿ ಎನ್.ವಿಷ್ಣುವರ್ಧನ ಮತ್ತು ಚಾಮರಾಜನಗರ ಜಿಲ್ಲಾ ಎಸ್‍ಪಿಯಾಗಿ ಎಚ್.ಡಿ.ಆನಂದ್‍ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos