ಇನ್ಮುಂದೆ ಸೈಕಲ್ ನಲ್ಲಿ ಪೊಲೀಸ್ ಗಸ್ತು

ಇನ್ಮುಂದೆ ಸೈಕಲ್ ನಲ್ಲಿ ಪೊಲೀಸ್ ಗಸ್ತು

ಬೆಂಗಳೂರು, ಡಿ. 16: ಈ ಮೊದಲು ಬೆಂಗಳೂರು ನಗರದಲ್ಲಿ ಬೈಕ್ ಇಲ್ಲದ ಕಾಲಾವಾಧಿಯಲ್ಲಿ ಸೈಕಲ್ ನಲ್ಲಿಯೇ ಪೊಲೀಸರು ಗಸ್ತು ತಿರುಗುತ್ತಿದ್ದರು. ಇದೇ ವ್ಯವಸ್ಥೆಗೆ ಇದೀಗ ಮರು ಜೀವ ನೀಡಿದ್ದು, ಪೆಡಲ್ ಪೊಲೀಸ್ ಗಸ್ತು ವ್ಯವಸ್ಥೆಯನ್ನು ನಗರದಲ್ಲಿ ಜಾರಿ ಮಾಡಲಾಗಿದೆ. ಈ ಮೂಲಕ ಇನ್ಮುಂದೆ ಸೈಕಲ್ ನಲ್ಲೂ ಪೊಲೀಸರು ಗಸ್ತು ಹೊಡೆಯಲಿದ್ದಾರೆ.

ಇಂತಹ ಪೆಡಲ್ ಪೊಲೀಸ್ ಗಸ್ತು ವ್ಯವಸ್ಥೆಯನ್ನು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ. ಪ್ರತಿ ಠಾಣೆಗೂ 5 ಸೈಕಲ್ ಗಳನ್ನು ವಿತರಿಸಿರುವ ಪೊಲೀಸ್ ಇಲಾಖೆ, ಸೈಕಲ್ ನಲ್ಲಿಯೇ ಗಸ್ತು ತಿರುಗುವ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಈ ಮೂಲಕ ನಗರದಲ್ಲಿ ಮತ್ತಷ್ಟು ಗಸ್ತು ಸೇವೆಯನ್ನು ಬಿಗಿ ಗೊಳಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos