ಪೊಲೀಸರ ವಶಕ್ಕೆ ಕಳ್ಳರು

ಪೊಲೀಸರ ವಶಕ್ಕೆ ಕಳ್ಳರು

ತುಮಕೂರು , ಅ. 8 : ಜಿಲ್ಲೆಯ ಪಾವಗಡ ಪಟ್ಟಣ ಬಸ್ ನಿಲ್ದಾಣದಲ್ಲಿ ಪರ್ಸ್ ಕದಿಯುತ್ತಿದ್ದ 6 ಮಂದಿ ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಲದಲ್ಲಿ 6 ಮಂದಿ ಕಳ್ಳರ ಗುಂಪು ಇತ್ತು. ಕಳ್ಳರು ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಪರ್ಸ್ ಕದಿಯುತ್ತಿದ್ದವನ್ನು ನೋಡಿದ ಸಾರ್ವಜನಿಕರು 6 ಮಂದಿ ಹಿಡಿದು ಥಳಿಸಿ ಪೊಲೀಸ್ ಠಾಣೆಗೆ ಕರೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos