ಕನ್ನಡದಿಂದ ಉರ್ದು, ಉರ್ದುವಿನಿಂದ ಕನ್ನಡಕ್ಕೆ ಕವಿತೆಗಳ ಅನುವಾದ ಕಮ್ಮಟ

ಕನ್ನಡದಿಂದ ಉರ್ದು, ಉರ್ದುವಿನಿಂದ ಕನ್ನಡಕ್ಕೆ ಕವಿತೆಗಳ ಅನುವಾದ ಕಮ್ಮಟ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಮಾರ್ಚ್ 8-10 ವರೆಗೆ

ರಾಯಚೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು “ಹೊಸ ಶತಮಾನದ ಯುವಕಾವ್ಯ” ಕುರಿತಂತೆ ಕನ್ನಡದಿಂದ ಉರ್ದು, ಮತ್ತು ಉರ್ದುವಿನಿಂದ ಕನ್ನಡಕ್ಕೆ ಕವಿತೆಗಳ ಅನುವಾದ ಕಮ್ಮಟವನ್ನು ಆಯೋಜಿಸಿದೆ.

ಈ ಕಮ್ಮಟದಲ್ಲಿ 40 ಅನುವಾದಕರು ಮಾತ್ರ ಭಾಗವಹಿಸಲು ಅವಕಾಶವಿದೆ. ನಾಡಿನ ಹಿರಿಯ ಚಿಂತಕರಾದ ಡಾ.ರಹಮತ್ ತರೀಕೆರೆಯವರ ನಿರ್ದೇಶನದಲ್ಲಿ ಈ ಕಮ್ಮಟವು ಮಾರ್ಚ್ ತಿಂಗಳ 8,9 ಮತ್ತು 10ರಂದು ಮೂರು ದಿನಗಳ ಕಾಲ ರಾಯಚೂರಿನಲ್ಲಿ ನಡೆಯಲಿದೆ.

ಈ ಕಮ್ಮಟದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಅನುವಾದಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಭಾಗವಹಿಸಿದ ಕಮ್ಮಟಾರ್ಥಿಗಳಿಗೆ ಪ್ರಾಧಿಕಾರವು ವಾಸ್ತವಿಕ ಪ್ರಮಾಣವೆಚ್ಚ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಿದೆ. ಈ ಕಮ್ಮಟದಲ್ಲಿ ಅನುವಾದಗೊಂಡ ಉರ್ದು ಮತ್ತು ಕನ್ನಡ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶವನ್ನು ಪ್ರಾಧಿಕಾರವು ಹೊಂದಿದೆ.

ಉರ್ದು ಅಥವಾ ಕನ್ನಡ ಭಾಷೆಯ ಅನುವಾದದಲ್ಲಿ ಆಸಕ್ತಿ ಇರುವ, ಅನುಭವವಿರುವ ಅಥವಾ ಈ ಎರಡೂ ಭಾಷೆಗಳನ್ನು ಚೆನ್ನಾಗಿ ಬಲ್ಲ ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಮಲ್ಲತ್ತಹಳ್ಳಿ, ಬೆಂಗಳೂರು,560056 ಈ ವಿಳಾಸಕ್ಕೆ ಫೆಬ್ರುವರಿ 18 ನೇ ತಾರೀಖಿನ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಫೋನ್ ಸಂಖ್ಯೆ 7892679105 ಗೆ ಸಂಪರ್ಕಿಸಬಹುದು ಎಂದು ಕುವೆಂಪು
ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರು ಹಾಗೂ ಅನುವಾದ ಕಮ್ಮಟದ ಸಂಚಾಲಕರಾದ ಬಿ.ಪೀರ್ ಬಾಷ
ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos