ದ್ವಾರಕ ಭೇಟಿ ಮಾಡಿದ ಮೋದಿ

ದ್ವಾರಕ ಭೇಟಿ ಮಾಡಿದ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದಲ್ಲಿದ್ದಾರೆ, ನೆನ್ನೆ ಗುಜರಾತ್ನ ಬೆಟ್ ದ್ವಾರಕಾ ಮತ್ತು ಒಕ ಮುಖ್ಯ ಭೂಮಿಯನ್ನು ಸಂಪರ್ಕಿಸುವ ಸುಮಾರು ಎರಡುವರೆ ಕಿಲೋಮೀಟರ್ ಉದ್ದದ ಕೇಬಲ್ ಸೇತುವೆಯನ್ನು ಪ್ರಧಾನಿ ಉದ್ಘಾಟಿಸಿದರು.

ಇದಕ್ಕೂ ಮುನ್ನ ದ್ವಾರಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ದ್ವಾರಕಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಕರಾವಳಿಯ ಅರಬಿ ಸಮುದ್ರದಲ್ಲಿ ಮುಳುಗಿರುವ ಪ್ರಾಚೀನ ನಗರವಾದ ದ್ವಾರಕಾ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಈ ಬಗ್ಗೆ ಪ್ರಧಾನಿ ಮೋದಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ ಇದು ಭಗವಾನ್ ಶ್ರೀ ಕೃಷ್ಣನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪ್ರಾಚೀನ ನಗರವಾಗಿದೆ ಮತ್ತು ಭವ್ಯತೆ ಮತ್ತು ಸಮೃದ್ಧಿಯ ಕೇಂದ್ರವಾಗಿತ್ತು ಪ್ರಧಾನಿ ಮೋದಿ ಅವರು ದ್ವಾರಕಾ ಭೇಟಿ ದೈವಿಕ ಕ್ಷಣಗಳನ್ನು ಚಿತ್ರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನೀರಿನಲ್ಲಿ ಮುಳುಗಿರುವ ಪವಿತ್ರ ದ್ವಾರಕಾ ನಗರದಲ್ಲಿ ಪ್ರಾರ್ಥಿಸಿ ಭಗವಾನ್ ಶ್ರೀ ಕೃಷ್ಣನ ಆಶೀರ್ವಾದ ಪಡೆದ ಮೋದಿಜೀ, ಮಥುರಾದಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭಕ್ಕೆ ತೆರಳಿದ ವೇಳೆ ಸಮುದ್ರದಲ್ಲಿ ಮುಳುಗಿರುವ ಮಥುರಾ ನಗರದ ದರ್ಶನ ಪಡೆದ ಮೋದಿ.

ಫ್ರೆಶ್ ನ್ಯೂಸ್

Latest Posts

Featured Videos