ಹೊಸಕೋಟೆಯಲ್ಲಿ ಆಣೆ ಪ್ರಮಾಣಗಳ ಹಾವಳಿ!

ಹೊಸಕೋಟೆಯಲ್ಲಿ ಆಣೆ ಪ್ರಮಾಣಗಳ ಹಾವಳಿ!

ಹೊಸಕೊಟೆ, ನ. 12: ರಾಜ್ಯದಲ್ಲಿ ಉಪಕದನದ ಕಾವು ದಿನದಿಂದ ದಿನಕ್ಕೆ ಏರುತ್ತಿರುವಾಗ, ರಾಜ್ಯದ ರಾಕೀಯದಲ್ಲಿ ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಹೊಸಕೊಟೆ ಕ್ಷೇತ್ರದಲ್ಲಿ ರಾಜಕೀಯದ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೀಗಾಗಿ ಹೊಸಕೊಟೆ ಬೈಎಲೆಕ್ಷನ್ ಗೆ ನಾಯಕರ ನಡುವೆ ಆಣೆ-ಪ್ರಮಾಣ ಕಾಲಿಟ್ಟಿದೆ.

ಕ್ಷೇತ್ರ ಬಿಟ್ಟುಕೊಡುವ ವಿಚಾರವಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜು ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಕಮಲ ಮುಖಂಡರ ಸಮ್ಮುಖದಲ್ಲಿ ಒಳಒಪ್ಪಂದ ಮಾಡಿಕೊಂಡಿದ್ದಾರೆನ್ನುವ ಮಾತುಗಳನ್ನು ಎಂಟಿಬಿಯವರೇ ಬಾಯ್ಬಿಟ್ಟಿದ್ದರು. ಆದರೆ, ಚುನಾವಣೆ ಸಮೀಪಿಸುತ್ತಿರುವಾಗಲೇ ಕೊಟ್ಟ ಮಾತುಗಳೆನ್ನು ಈಗ ಉಲ್ಟ ಹೊಡೆಯುತ್ತಿದ್ದಾರೆಂದು ಎಂಟಿಬಿ ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರ ಬಿಟ್ಟುಕೊಡುವ ವಿಚಾರವಾಗಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಶರತ್ ಹಾಗೂ ಎಂಟಿಬಿ ನಡುವೆ ಮಾತುಕತೆ ನಡೆದಿರುವ ಬಗ್ಗೆ ಹೊಸಕೋಟೆ ಕದನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಚ್ಚೇಗೌಡ ಮಾತುಕೊಟ್ಟು ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾಲ ಸಮೀಪಿಸುವಾಗ ಉಲ್ಟಾ ಹೊಡೆಯುತ್ತಿದ್ದಾರೆ. ಹೀಗಾಗಿ ಇಬ್ಬರು ಗಟಾನುಘಟಿಗಳ ಮಧ್ಯೆ ಟಾಕ್ ವಾರ್ ಶುರುವಾಗಿದೆ. ಕೊಟ್ಟ ಮಾತುಗಳನ್ನು ಸಮರ್ಥನೆ ಮಾಡಿಕೊಳ್ಳುವ ಸಲುವಾಗಿ ಧರ್ಮಸ್ಥಳ ಮಂಜುನಾಥ ದೇವರ ಮೇಲೆ ಆಣೆ-ಪ್ರಮಾಣ ಮಾಡಿ ಹೇಳುವಂತೆ ಎಂಟಿಬಿ ಶರತ್ ಗೆ ಸವಾಲ್ ಅನ್ನು ಹಾಕಿದ್ಧಾರೆ.

ಎಂಟಿಬಿ ಸವಾಲಿಗೆ ಕೌಂಟರ್ ಎನ್ನುವಂತೆ ಶರತ್ ಬಚ್ಚೇಗೌಡ ಅವರು ಕೂಡ ಆಣೆ-ಪ್ರಮಾಣಕ್ಕೆ ರೆಡಿಯಾದರೆ. ನಾನು ಮಾತ್ರ ಸಹಾ ಸಿದ್ದನಿದ್ದೇನೆ, ಹಾಗಾದರೆ ಅವರು ದೇವಸ್ಥಾನಕ್ಕೆ ಬಂದು ಸವಾಲಿಗೆ ಸಿದ್ದವಾಗಿ ಬರಲಿ ಎಂದು ಶರತ್ ಅವರು ಎಂಟಿಬಿಗೆ ಓಪನ್ ಸವಾಲು ಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos