ಅಬ್ಬಬ್ಬಾ ಈ ಪ್ಲಾಸ್ಟಿಕ್ ಬಾಟ್ಲಿ ಚಪ್ಪಲಿಯ ಬೆಲೆ 1423 ರೂ.ಗಳಂತೆ!

ಅಬ್ಬಬ್ಬಾ ಈ ಪ್ಲಾಸ್ಟಿಕ್ ಬಾಟ್ಲಿ ಚಪ್ಪಲಿಯ ಬೆಲೆ 1423 ರೂ.ಗಳಂತೆ!

ನ್ಯೂಜಿಲ್ಯಾಂಡ್, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ಸು ಕಾಣುವ ಜನರ ಸಂಖ್ಯೆ ಸಾಕಷ್ಟಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಹೊಸ ಪ್ರಯೋಗ ಮಾಡಿ ಸುದ್ದಿಯಾಗಿದ್ದಾಳೆ. ನ್ಯೂಜಿಲ್ಯಾಂಡ್ ನ ಮಹಿಳೆ ಪ್ಲಾಸ್ಟಿಕ್ ಖಾಲಿ ಬಾಟಲಿಯಲ್ಲಿ ಚಪ್ಪಲಿ ತಯಾರಿಸಿದ್ದಾಳೆ. ಪ್ಲಾಸ್ಟಿಕ್ ನ ಈ ಚಪ್ಪಲಿ ಆನ್ಲೈನ್ ನಲ್ಲಿ ಮಾರಾಟವಾಗ್ತಿದೆ. ಚಪ್ಪಲಿಗೆ ಸಾಕಷ್ಟು ಬೇಡಿಕೆಯಿದೆ. ಈ ಚಪ್ಪಲಿ ಬೆಲೆ ಕೇಳಿದ್ರೆ ಆಶ್ಚರ್ಯವಾಗುತ್ತದೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿದ್ಧವಾದ ಈ ಚಪ್ಪಲಿ ಬೆಲೆ ಬರೋಬ್ಬರಿ 1423 ರೂಪಾಯಿ. ಫೇಸ್ಬುಕ್ ನಲ್ಲಿ ನ್ಯೂಜಿಲ್ಯಾಂಡ್ ಮಹಿಳೆಯರು ಇದ್ರ ಜಾಹೀರಾತು ನೀಡ್ತಿದ್ದಾರೆ. ವಿತರಣಾ ಶುಲ್ಕ ನೀಡುವವರು ನೀಡಬಹುದು ಎಂದು ಮಹಿಳೆ ಹೇಳಿದ್ದಾಳೆ. ಮಹಿಳೆ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬರ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ತೆಂಗಿನಕಾಯಿ ಚಿಪ್ಪೊಂದು ಭಾರಿ ಮೊತ್ತಕ್ಕೆ ಮಾರಾಟಕ್ಕಿತ್ತು. Natural Cocunut Shell Cup ಗೆ ರಿಯಾಯಿತಿ ನೀಡಲಾಗಿತ್ತು. ರಿಯಾಯಿತಿ ನಂತ್ರ ಇದ್ರ ಬೆಲೆ 1365 ರೂಪಾಯಿಯಾಗಿತ್ತು. ಇದನ್ನು ನೋಡಿ ಜನರು ದಂಗಾಗಿದ್ದು ಸುಳ್ಳಲ್ಲ.

ಫ್ರೆಶ್ ನ್ಯೂಸ್

Latest Posts

Featured Videos