ಪ್ಲಾಸ್ಟಿಕ್ ಬಳಕೆ ಗೆ ಖಡಕ್ ವಾರ್ನಿಂಗ್

ಪ್ಲಾಸ್ಟಿಕ್ ಬಳಕೆ ಗೆ ಖಡಕ್ ವಾರ್ನಿಂಗ್

ಹಾಸನ, ಜು. 27 : ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಅನೇಕ ಬಾರಿ ಸೂಚಿಸಿದ್ದರೂ ಮತ್ತೆ ಬಳಕೆ ಮಾಡಿದ್ದರಿಂದ ದಂಡ ವಿಧಿಸಲಾಗಿತ್ತು. ನಗರಸಭೆ ಆಯುಕ್ತ ಪರಮೇಶ್ ಆದೇಶದ ಮೇರೆಗೆ ಬೆಳ್ಳಂಬೆಳಗ್ಗೆ ಅನ್ವರ್ ಎಂಬುವರ ಹಣ್ಣುಗಳನ್ನೆಲ್ಲ ನಗರಸಭೆ ತಮ್ಮ ವಾಹನದಲ್ಲಿ ತುಂಬಿಕೊಂಡು ವಶಪಡಿಸಿಕೊಳ್ಳಲಾಯಿತು. ಆದರೆ, ವಾಪಸ್ ಹಣ್ಣುಗಳನ್ನು ಕೊಡುವಂತೆ ವ್ಯಾಪಾರಿಗಳು ನಗರಸಭೆಯಲ್ಲಿ ಮನವಿ ಮಾಡಿದ್ದಾರೆ.
ಕಟ್ಟಿನಕೆರೆ ಮಾರುಕಟ್ಟೆ, ಮೂನ್ಲೈಟ್ ಬಾರ್ ಮುಂಭಾಗ ರಸ್ತೆ ಬದಿಯಲ್ಲಿ ಇಡಲಾಗಿರುವ ಅನ್ವರ ಎಂಬುವರ ಹಣ್ಣಿನ ಅಂಗಡಿ ನಗರಸಭೆ ಬಂದ್ ಮಾಡಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಹಣ್ಣಿನ ಅಂಗಡಿಗೆ ನಗರಸಭೆ ಆಯುಕ್ತರು ಬಂದು 2 ಕೆಜಿ ದಾಳಿಂಬೆ ಹಣ್ಣನ್ನು ಖರೀದಿ ಮಾಡಿದರು. ಆಗ ಅವರಿಗೆ ಪ್ಲಾಸ್ಟಿಕ್ ಕವರ್ನಲ್ಲಿಯೇ ಹಾಕಿ ಕೊಡಲಾಗಿತ್ತು. ಈ ವೇಳೆ ವ್ಯಾಪಾರಿ ಅನ್ವರ್ ಎಂಬುವರಿಗೆ ಬುದ್ಧಿವಾದ ಹೇಳಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos