ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇದ್ಧ

ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇದ್ಧ

ಬೆಂಗಳೂರು ,18. ಆ : ಬೆಂಗಳೂರಿನಲ್ಲಿ ಸೆಪ್ಟೆಂಬರ್ 1 ರಿಂದ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸುವ ಹೊಸ ನಿಯಮವನ್ನು ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.ಶನಿವಾರ ನಡೆದ ಪಾಲಿಕೆಯ ವಿಶೇಷ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಎನ್ ಜಿಟಿ ರಾಜ್ಯ ಸಮಿತಿಯ ಅಧ್ಯಕ್ಷ ನ್ಯಾ. ಸುಭಾಷ್ ಬಿ ಡಿ ಅವರು ಈ ವಿಷಯವನ್ನು ಪ್ರಕಟಿಸಿದರು. ಪ್ಲಾಸ್ಟಿಕ್ ತಯಾರಿಕೆ ಕೆಲ ಘಟಕಗಳ ಬಂದ್ ಮಾಡಲಾಗಿದೆ. ಮತ್ತಷ್ಟು ಘಟಕಗಳನ್ನು ಪತ್ತೆ ಹಚ್ಚಿ ಬಾಗಿಲು ಹಾಖಿಸುವ ಕೆಲಸವನ್ನು ಮುಂದುವರೆಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್ ಸಿಗುವಂತೆ ಉಪಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಯಾವುದೇ ಅಂಗಡಿಗಳಲ್ಲಿ ಗ್ರಾಹಕರಿಗೆ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಲ್ಲಿ ನೀಡುವಂತಿಲ್ಲ. ನಾಗರಿಕರು ಕೂಡ ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಒಯ್ಯುವಂತಿಲ್ಲ. ಈ ನಿಯಮ ಮೀರಿದವರಿಗೆ ಸ್ಥಳದಲ್ಲೇ ಮೊದಲು 500 ರೂ. ದಂಡ ವಿಧಿಸಲಾಗುತ್ತದೆ. 2 ನೇ ಬಾರಿಗೆ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ವಿಧಿಸಲಾಗುವುದು. ಈ ನಿಯಮವು ಪ್ಲಾಸ್ಟಿಕ್ ಉತ್ಪಾದಕರು ಮತ್ತು ಮಾರಾಟಗಾರರಿಗೂ ಅನ್ವಯವಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos