ಪೈಲ್ವಾನ್‍ನ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ…?

ಪೈಲ್ವಾನ್‍ನ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ…?

ಬೆಂಗಳೂರು, ಸೆ. 13: ಇತ್ತೀಚಿಗೆ ಸ್ಯಾಂಡಲ್‍ವುಡ್‍ನಲ್ಲಿ ಸಿನಿಮಾ ಬಿಡುಗಡೆ ಆಗ್ತಾಯಿದೆ ಅಂದ್ರೆ ಬರೀ ಕರ್ನಾಟಕದ ಸಿನಿಮಾ ಅಭಿಮಾನಿಗಳಲ್ಲ, ದೇಶ-ವಿದೇಶದಲ್ಲಿನ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯ್ತಾಯಿರ್ತಾರೆ.

ಹೌದು, ಸ್ಯಾಂಡಲ್‍ ವುಡ್‍ ನಲ್ಲಿ ನಿರ್ಮಾಣವಾದ ಕೆಜಿಎಫ್ ಸಿನಿಮಾ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗಾ ಪೈಲ್ವಾನ್ ಸರದಿ ಆರಂಭವಾಗಿದೆ.

ಕೆಜಿಎಫ್‍ನ ನಂತ್ರದ ಸ್ಯಾಂಡಲ್‍ವುಡ್‍ ನ ಬಹುನಿರೀಕ್ಷಿತ ಚಲನಚಿತ್ರವಾದ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರ ಬಿಡುಗಡೆಗೂ ಮನ್ನವೇ ಭಾರೀ ಸದ್ದು ಮಾಡಿತ್ತು. ಇದೀಗಾ ಸೆಪ್ಟೆಂಬರ್ 12 ರಂದು ತೆರೆಗೆ ಅಪ್ಪಳಿಸಿದ್ದು,  ಮೊದಲ ದಿನವೇ ಸಿನಿ ಅಭಿಮಾನಿಗಳಿಂದ ಒಳ್ಳೆಯ ರೆಸ್ಫಾನ್ಸ್ ಸಿಗ್ತಾಯಿದೆ. ಕಿಚ್ಚನ ಅಭಿನಯಕ್ಕೆ ಅಭಿಮಾನಿಗಳಂತೂ ಪುಲ್ ಫಿದಾ ಆಗಿದ್ದಾರೆ.

ಕಿಚ್ಚ ಸುದೀಪ್ ಅಭಿಮಾನಿಗಳಿಗಂತೂ ತಮ್ಮ ನಾಯಕನ ಚಿತ್ರವನ್ನ ನೋಡಲು ಚಿತ್ರಮಂದಿರದ ಮುಂದೆ ಬೆಳಗ್ಗಿನ ಜಾವ 04 ಗಂಟೆಯ ಸುಮಾರಿಗೆ ದೌಡಾಯಿಸಿ ಸಂಭ್ರಮಾಚರಣೆಯನ್ನ ಆಚರಿಸಿದ್ದು… ನಂತ್ರ ಸಿನಿಮಾ ನೋಡಲು ಕಾತುರದಿಂದ ಕಾಯ್ತಾಯಿದ್ರೂ….ಇತ್ತ ಫಸ್ಟ್ ಶೋ ನೋಡಿ ಥೇಟರ್‍ನಿಂದ ಹೊರಬಂದ ಅಭಿಮಾನಿಗಳ ಮುಖದಲ್ಲಂತೂ ಖಷಿಯೋ-ಖುಷಿ.

ಇನ್ನೂ ಚಿತ್ರದ ಬಗ್ಗೆ ರೆಸ್ಫಾನ್ಸ್ ಏನೋ ತಿಳಿದಿದಾಯ್ತು.. ಹಾಗಾದ್ರೆ ಮೊದಲ ದಿನದ  ಕಲೆಕ್ಷನ್ ಎಷ್ಟಾಯ್ತು ಎಂಬುದರ ಬಗ್ಗೆ ಕುತೂಹಲ ಇರುತ್ತೆ ಅಲ್ವಾ.. ದೇಶ-ವಿದೇಶಗಳಲ್ಲಿ ಸುಮಾರು 3500 ಸಾವಿರಕ್ಕೂ ಹೆಚ್ಚು ಥೇಟರ್‍ಗಳಲ್ಲಿ ಪ್ರದರ್ಶನ ಕಂಡಿದ್ದು, ಕನ್ನಡ ಭಾಷೆಯಲ್ಲಿ 10 ಕೋಟಿ, ತೆಲಗು ಭಾಷೆಯಲ್ಲಿ 2 ಕೋಟಿ, ಹಿಂದಿಯಲ್ಲಿ 5 ಕೋಟಿ, ತಮಿಳಿನಲ್ಲಿಯೂ ಸುಮಾರು 04 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಟೋಟಲಿ ಫಸ್ಟ್ ಡೇ 20 ಕೋಟಿ ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದಿ ಬಂದಿದೆ.

ಸಿನಿಮಾ ಬಿಡುಗೆಯಾದ ಮೊದಲ ದಿನವೇ ಕಲೆಕ್ಷನ್ ಮಟ್ಟ ಹೆಚ್ಚಿದ್ದು, ಇನ್ನೂ ಸಿನಿಮಾ ನೂರುದಿನಗಳ ಕಾಲ ಯಶಸ್ವಿಯತ್ತ ಸಾಗುತ್ತೆ ಜೊತೆಗೆ ಹೆಚ್ಚು ಕಲೆಕ್ಷನ್ ಕೂಡ ಮಾಡಲಿದೆ ಎಂಬುವುದು ಕಿಚ್ಚನ ಅಭಿಮಾನಿಗಳ ನಿರೀಕ್ಷೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos