ಪೆಟ್ರೋಲ್ ದರ 78 ರೂ.

ಪೆಟ್ರೋಲ್ ದರ 78 ರೂ.

ಬೆಂಗಳೂರು, ಜ.6 : ಒಂದೆಡೆ ಪೆಟ್ರೋಲ್ ದರ ದಿನದಿಂದ ದಿನಕ್ಕೆ 10 ಪೈಸೆ ಏರಿಕೆ ಕಂಡು ಬರುತ್ತಿದ್ದರೆ, ಮತ್ತೊಂದೆಡೆ ಪೆಟ್ರೋಲ್ ದರಕ್ಕೆ ಸಡ್ಡು ಹೊಡೆಯುವ ರೀತಿಯಲ್ಲಿ ಡೀಸೆಲ್ ದರದಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ 10 ದಿನಗಳಲ್ಲಿ ಪೆಟ್ರೋಲ್ ದರದ ಮೇಲೆ 1 ರೂ.ಗಳನ್ನು ಹೆಚ್ಚಾಗಿದೆ.ಕಳೆದ 10 ದಿನಗಳಿಂದ ಪ್ರತಿದಿನ 10 ಪೈಸೆಯಂತೆ ಏರುತ್ತಲೇ ಇರುವ ಪೆಟ್ರೋಲ್ ದರ ಬೆಂಗಳೂರಿನಲ್ಲಿ ಇದೀಗ 78 ರೂ. ದಾಟಿದೆ. ಕಳೆದೊಂದು ವಾರದಲ್ಲಿ 73 ಪೈಸೆ ಏರಿಕೆ ಕಂಡಿದೆ. ಮುಂಬಯಿನಲ್ಲಿ ಈಗಾಗಲೇ 81ರ ಗಡಿ ದಾಟಿದೆ.ಬೆಂಗಳೂರಿನಲ್ಲಿ ಲೀಟರ್ ಒಂದರ ಪೆಟ್ರೋಲ್ ದರ 78.07 ರೂ. ಇದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 75.54 ರೂ. ಇದೆ. ಕೋಲ್ಕತದಲ್ಲಿ 78.13 ರೂ. ಹಾಗೂ ಚೆನ್ನೈನಲ್ಲಿ 78.48 ರೂ. ಇದೆ.

ಡೀಸೆಲ್ ದರ 12 ಪೈಸೆ ಏರಿಕೆಯಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ 56 ಪೈಸೆ ಏರಿಕೆ ಕಂಡಿದ್ದು 71 ರೂ. ಸಮೀಪಿಸಿದೆ. ಬೆಂಗಳೂರಲ್ಲಿ ಲೀಟರ್ ಒಂದಕ್ಕೆ ಡೀಸೆಲ್ ದರ 70.79 ರೂ. ಇದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 68.51 ರೂ. ಇದೆ. ಕೋಲ್ಕತದಲ್ಲಿ 70.87 ರೂ., ಚೆನ್ನೈನಲ್ಲಿ 72.39 ರೂ. ಇದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ 71.84 ರೂ. ಇದೆ.

ಫ್ರೆಶ್ ನ್ಯೂಸ್

Latest Posts

Featured Videos