ಪೆರ್ರಿ ಅಬ್ಬರಕ್ಕೆ ಕಾರಿನ ಗ್ಲಾಸ್ ಪುಡಿಪುಡಿ..!

ಪೆರ್ರಿ ಅಬ್ಬರಕ್ಕೆ ಕಾರಿನ ಗ್ಲಾಸ್ ಪುಡಿಪುಡಿ..!

ಬೆಂಗಳೂರು: ವುಮೆನ್ ಪ್ರೀಮಿಯರ್ ಲೀಗ್ ನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು ಇನ್ನೆರಡು ಪಂದ್ಯಗಳನ್ನು ಸೋತಿದ್ದು ಇಂದು ಬೆಂಗಳೂರು ಬುಲ್ಸ್ 5ನೇ ಪಂದ್ಯವಾಡಿತ್ತು. ವುಮೆನ್ಸ್​ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗಿತ್ತು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್‌ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದ ಯುಪಿ ವಾರಿಯರ್ಸ್​ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.

ಆರ್​ಸಿಬಿ ಪರ ನಾಯಕಿ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 80 ರನ್ ಸಿಡಿಸಿದರೆ, ನಾಯಕಿಗೆ ಉತ್ತಮ ಸಾಥ್ ನೀಡಿದ ಎಲ್ಲಿಸ್ ಪೆರ್ರಿ ಕೂಡ 37 ಎಸೆತಗಳಲ್ಲಿ 58 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದೇ ವೇಳೆ ಪೆರ್ರಿ ಬಾರಿಸಿದ ಪವರ್​ಫುಲ್ ಸಿಕ್ಸರ್ ಬೌಂಡರಿ ಬಳಿ ನಿಲ್ಲಿಸಿದ್ದ ಟಾಟಾ ಪಂಚ್​ ಕಾರಿನ ಗ್ಲಾಸನ್ನು ಪುಡಿಗಟ್ಟಿತು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆರ್​ಸಿಬಿ ಇನ್ನಿಂಗ್ಸ್​ನ 19ನೇ ಓವರ್ ಬೌಲ್ ಮಾಡಲು ಬಂದ ದೀಪ್ತಿ ಶರ್ಮಾ ಓವರ್​ನ ಮೂರನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿ ತಮ್ಮ ಅರ್ಧಶತಕವನ್ನು ಪೂರೈಸಿದ್ದ ಪೆರ್ರಿ, ಇದೇ ಓವರ್​ನ ಐದನೇ ಎಸೆತವನ್ನು ಭರ್ಜರಿ ಸಿಕ್ಸರ್​ಗಟ್ಟಿದರು. ಈ ಸಿಕ್ಸರ್, ಮೈದಾನದ ಬೌಂಡರಿ ಗೆರೆಯತ್ತ ನಿಲ್ಲಿಸಿದ ಕಾರಿನ ಡೋರ್​ನ ಗ್ಲಾಸನ್ನು ಪುಡಿ ಪುಡಿ ಮಾಡಿತು. ಇದನ್ನು ನೋಡಿದ ಇಡೀ ಮೈದಾನ ಹುಚ್ಚೆದು ಕುಣಿಯಿತು.

ಫ್ರೆಶ್ ನ್ಯೂಸ್

Latest Posts

Featured Videos