‘ಮೆಣಸು’ ಹಲವು ರೋಗಗಳಿಗೆ ರಾಮಬಾಣ

‘ಮೆಣಸು’ ಹಲವು ರೋಗಗಳಿಗೆ ರಾಮಬಾಣ

ಬೆಂಗಳೂರು, ಡಿ. 11: ಕಾಳು ಮೆಣಸಿನಲ್ಲಿ ಸಾಕಷ್ಟು ಔಷಧಿ ಗುಣವಿದೆ. ಸಲಾಡ್, ಸೂಪ್, ಮಿಶ್ರಹಣ್ಣುಗಳಿಗೆ ಇದನ್ನು ಬೆರೆಸಿ ತಿನ್ನಲಾಗುತ್ತದೆ. ಅಲ್ಲದೆ ಮನೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ.

ನಿಮ್ಮ ದೇಹದ ಮೇಲೆ ಗುಳ್ಳೆಗಳು ಕಂಡು ಬಂದಲ್ಲಿ ಈ ಕಾಳು ಮೆಣಸು ಒಳ್ಳೆಯ ಮನೆ ಮದ್ದು. ಸ್ವಲ್ಪ ನೀರಿನ ಜೊತೆ ಕಾಳುಮೆಣಸನ್ನು ಕಲ್ಲಿನ ಮೇಲೆ ಉಜ್ಜಿ ಆ ಮಿಶ್ರಣವನ್ನು ಗುಳ್ಳೆಗಳಿಗೆ ಹಚ್ಚುವುದರಿಂದ ಗುಳ್ಳೆ ಮಾಯವಾಗುತ್ತದೆ.

ಕಾಳು ಮೆಣಸು ಸೇವನೆಯಿಂದ ತಲೆ ನೋವು ಕಡಿಮೆಯಾಗುತ್ತದೆ. ಇದಲ್ಲದೆ ಬಿಕ್ಕಳಿಕೆ ಬರುವುದು ನಿಲ್ಲುತ್ತದೆ.

ಜೇನು ತುಪ್ಪದ ಜೊತೆ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವನೆ ಮಾಡುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ತುಳಸಿ ಜೊತೆ ಕಾಳು ಮೆಣಸಿನ ಪುಡಿ ಬೆರೆಸಿ ಕಷಾಯ ಮಾಡಿ ಕುಡಿಯುವುದರಿಂದ ನೆಗಡಿ, ಜ್ವರ ಗುಣವಾಗುತ್ತದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಾಳು ಮೆಣಸು ಒಳ್ಳೆಯದು.

ನ್ಯಾಚುರಲ್ ಆಯಂಟಿಬಯೋಟಿಕ್ ಆಗಿರುವ ಕಾಳು ಮೆಣಸು ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಕಾಳುಮೆಣಸಿನಲ್ಲಿರುವ ಪೈಪರ್ ಲೈನ್ ಅಂಶ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೊಡವೆಗೆ ಕಾಳುಮೆಣಸಿನ ಚೂರ್ಣವನ್ನು ವೀಳ್ಯದೆಲೆ ರಸದೊಂದಿಗೆ ಹಚ್ಚಬೇಕು.

ಜೀರ್ಣಶಕ್ತಿ ಹಾಗೂ ಹಸಿವು ಹೆಚ್ಚಿಸಲು ಇದರ ಚೂರ್ಣವನ್ನು ಮಜ್ಜಿಗೆಯೊಂದಿಗೆ ಬಳಸಬೇಕು.

ಕಾಳುಮೆಣಸು ಕ್ಯರಮೆತಿವ್ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಗೆ ಸಂಬಂಧಿಸಿದ ನೋವುಗಳನ್ನು ತಡೆಗಟ್ಟಲು ಸಹಾಯಕ.

 

ಫ್ರೆಶ್ ನ್ಯೂಸ್

Latest Posts

Featured Videos