ಮಳೆಯಿಂದ ಹೈರಾಣಾದ ಜನ

ಮಳೆಯಿಂದ ಹೈರಾಣಾದ ಜನ

ಬೆಂಗಳೂರು, ನ. 10 : ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಾಗರಿಕರು ಹೈರಾಣಾದರು. ಹೊಸಕೆರೆಹಳ್ಳಿ ಕೆರೆ, ಕೋಡಿಪಾಳ್ಯ ಕೆರೆಗಳ ಕೋಡಿ ಒಡೆದ ಪರಿಣಾಮ ಸಮೀಪದ ರಸ್ತೆಗಳು ಹಾಗೂ ಮನೆಗಳಿಗೆ ನೀರು ನುಗ್ಗಿದೆ.
ಪುಷ್ಪಗಿರಿ ಬಡಾವಣೆ ಸೇರಿದಂತೆ ಆ ಭಾಗದ ಬಹಳಷ್ಟು ಮನೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ಮನೆಯವರು ತೀವ್ರ ತೊಂದರೆ ಅನುಭವಿಸಿದರು.

ಬಿಬಿಎಂಪಿ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಮನೆಗಳಲ್ಲಿ ತುಂಬಿದ್ದ ನೀರನ್ನು ತೆಗೆಯಲು ಶ್ರಮಿಸಿದರು.
ಮಳೆ ಅನಾಹುತ ಪ್ರದೇಶಗಳಿಗೆ ರಾತ್ರಿಯೇ ಬಿಬಿಎಂಪಿ ಮೇಯರ್ ಗೌತಮ್ಕುಮಾರ್ ಹಾಗೂ ಆಯುಕ್ತ ಅನಿಲ್ಕುಮಾರ್ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.ನೈಸ್ ರಸ್ತೆ ನಿರ್ಮಾಣ ಸಂಬಂಧ ಬಿಡಿಎ ಹೊಸಕೆರೆಹಳ್ಳಿ ಬಳಿ ಕಾಂಫೌಂಡ್ ಹಾಕಿರುವುದರಿಂದ ಕೆರೆಯ ನೀರು ಹೊರಹೋಗಲಾಗದೆ ಕೋಡಿ ಒಡೆದು ಬಡಾವಣೆಗಳು ಜಲಾವೃತವಾಗಿವೆ ಎಂದು ಈ ವೇಳೆ ಮೇಯರ್ ಬೇಸರ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos