ನಾಳೆಯಿಂದ ಜನ ಶತಾಬ್ದಿ ರೈಲು ಸಂಚಾರ

ನಾಳೆಯಿಂದ ಜನ ಶತಾಬ್ದಿ ರೈಲು ಸಂಚಾರ

ಶಿವಮೊಗ್ಗ: ಜನ ಶತಾಬ್ದಿ ರೈಲು ಸಂಚಾರ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ನಾಳೆಯಿಂದ (ಫೆ. 3) ಆರಂಭವಾಗಲಿದೆ.

ವಾರದಲ್ಲಿ 4 ದಿನ ಸಂಚರಿಸುವ ರೈಲು, ಶಿವಮೊಗ್ಗ ಟೌನ್‌ನಿಂದ ಯಶವಂತಪುರ ರೈಲು ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲಿದೆ.

ಭಾನುವಾರ ಸಂಜೆ 6 ಗಂಟೆಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಜನಶತಾಬ್ದಿ ಓಡಾಟಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಸಂಜೆ ಶಿವಮೊಗ್ಗದಿಂದ ಬೆಂಗಳೂರಿನ ಯಶವಂಪುರಕ್ಕೆ ತೆರಳಲಿರುವ ರೈಲು, ಸೋಮವಾರದಿಂದ ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ.

ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಈಗಿರುವ ರೈಲು ಸಂಪರ್ಕ ಸಾಲುತ್ತಿರಲಿಲ್ಲ.ಹೀಗಾಗಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು, ಅವರಿಗೆ ಅನುಕೂಲಕರವಾದ ಸಮಯದಲ್ಲಿ ವಾರದಲ್ಲಿ ನಾಲ್ಕು ದಿನ ಜನಶತಾಬ್ದಿ ರೈಲು ಸಂಪರ್ಕ ಕಲ್ಪಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos