ಉದ್ಯಮಿಯಿಂದ ಪೆಂಟ್ ಹೌಸ್ ಖರೀದಿ

ಉದ್ಯಮಿಯಿಂದ ಪೆಂಟ್ ಹೌಸ್ ಖರೀದಿ

ಜು,10 : ಬ್ರಿಟಿಷ್ ಶತಕೋಟ್ಯಧಿಪತಿ ಸಂಶೋಧಕ ಜೇಮ್ಸ್ ಡೈಸನ್ ಸಿಂಗಾಪೂರ್ ನಲ್ಲೇ ಅತ್ಯಂತ ದುಬಾರಿಯ ಪೆಂಟ್ ಹೌಸ್ ಖರೀದಿ ಮಾಡಿದ್ದಾರೆ. 54 ಮಿಲಿಯನ್ ಡಾಲರ್ (ಭಾರತೀಯ ರುಪಾಯಿ ಲೆಕ್ಕದಲ್ಲಿ ಮುನ್ನೂರಾ ಐವತ್ತು ಕೋಟಿಗೂ ಹೆಚ್ಚು) ಪಾವತಿಸಿದ್ದಾರೆ. ಡೈಸನ್ ಅವರ ಎಲೆಕ್ಟ್ರಿಕ್ ಅಪ್ಲೈಯನ್ಸ್ ಕಂಪೆನಿಯು ಬ್ಯಾಗ್ ರಹಿತ ವ್ಯಾಕ್ಯೂಮ್ ಕ್ಲೀನರ್, ಹ್ಯಾಂಡ್ ಡ್ರೈಯರ್ಸ್ ಮತ್ತು ಫ್ಯಾನ್ಸ್ ಗೆ ಖ್ಯಾತಿ ಪಡೆದಿದೆ. ಇಂಗ್ಲೆಂಡ್ ನಲ್ಲಿರುವ ಕಂಪೆನಿಯ ಕೇಂದ್ರ ಕಚೇರಿಯನ್ನು ಏಷ್ಯನ್ ಮಾರುಕಟ್ಟೆಗೆ ಹತ್ತಿರ ಆಗುವಂತೆ ಸ್ಥಳಾಂತರಿಸುವ ಬಗ್ಗೆ ಘೋಷಿಸಲಾಗಿತ್ತು.
ಕಂಪೆನಿಯು ಎಲೆಕ್ಟ್ರಿಕ್ ಕಾರು ಉತ್ಪಾದಿಸುವ ಆಲೋಚನೆ ಕೂಡ ಹೊಂದಿದೆ.ಯುರೋಪ್ ಒಕ್ಕೂಟದಿಂದ ಆಚೆ ಬರಲು ಬ್ರಿಟನ್ ನಿರ್ಧರಿಸಿದ 2016ರಲ್ಲೇ ವಿಸ್ತರಣೆಗೆ ಆಲೋಚಿಸಲಾಗಿತ್ತು. ಇದೀಗ ಡೈಸನ್ 21,000 ಚದರಡಿಯ ಸೂಪರ್ ಪೆಂಟ್ ಹೌಸ್ ಖರೀದಿ ಮಾಡಿರುವುದಾಗಿ ಸಿಂಗಾಪೂರ್ ನ ಬಿಜಿನೆಸ್ ಟೈಮ್ಸ್ ನಿಯತಕಾಲಿಕೆ ವರದಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos