ಸಿಗರೇಟ್ ಚಿಲ್ಲರೆ ಮಾರಿದರೆ ದಂಡ

ಸಿಗರೇಟ್ ಚಿಲ್ಲರೆ ಮಾರಿದರೆ ದಂಡ

ಬೆಂಗಳೂರು, ಸೆ. 23: ಚಿಲ್ಲರೆಯಾಗಿ ಸಿಗರೇಟ್ ಮಾರಾಟ ಮಾಡುವುದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ ಇಂತಹ ಪ್ರಕರಣಗಳಲ್ಲಿ ಸಿಕ್ಕಿಬೀಳುವ ವ್ಯಾಪಾರಿಗಳಿಗೆ ಪ್ರತಿ ವ್ಯಕ್ತಿಗೆ ಸಿಗರೇಟು ಲೆಕ್ಕದಲ್ಲಿ 200 ರೂ. ದಂಡ ವಿಧಿಸಲು ತೀರ್ಮಾನಿಸಿದೆ.

ಬಿಡಿ ವ್ಯವಹಾರದ ಮೇಲೆ ನಿಗಾ ಇಟ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಕ್ಕಾಗಿ ಶಿಕ್ಷಣ, ವಾಣಿಜ್ಯ, ಪೊಲೀಸ್, ಅಬಕಾರಿ, ನಗರ ಸ್ಥಳೀಯ ಸಂಸ್ಥೆ ಒಳಗೊಂಡ ತಂಡ ರಚಿಸಿದೆ.

ಸಂಚಾರ ನಿಯಮ ಉಲ್ಲಂಘನೆಗೆ ದಂಡ ಹೆಚ್ಚಿಸಿದ ಹಾಗೆ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನ ಕಾಯ್ದೆಯಡಿ ದಂಡದ ಪ್ರಮಾಣ ಹೆಚ್ಚಿಸುವ ಕುರಿತು ಆರೋಗ್ಯ ಇಲಾಖೆ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ದಂಡ ಪ್ರಮಾಣ ಪ್ರಸ್ತುತ 200 ರೂ.

ವಯೋಮಿತಿ 21 ಕ್ಕೆ ಏರಿಕೆ: ಈಗಿರುವ ಕಾಯ್ದೆ ಪ್ರಕಾರ 18 ವರ್ಷ ಮೇಲ್ಪಟ್ಟವರು ತಂಬಾಕು ಸೇವನೆ ಮಾಡಲು ಅಡ್ಡಿಯಿಲ್ಲ. ಆದರೆ, ಕಾಯ್ದೆ ಮಾರ್ಪಡಿಸಿ, ವಯೋಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸುವ ಚಿಂತನೆಯೂ ಇದೆ. ಕಾಯ್ದೆ ಜಾರಿಯಾದರೆ, 21 ವರ್ಷದ ಒಳಗಿನವರು ಸಿಗರೇಟು ಸೇದುವುದು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟು ಮಾರಾಟ ಮಾಡುವುದು ದಂಡನಾರ್ಹ.

ಮಾರಾಟಕ್ಕೆ ಪರವಾನಗಿ: ಬಾರ್ ಮತ್ತಿತರ ಅಂಗಡಿ-ಮುಂಗಟ್ಟುಗಳಿಗೆ ಇರುವಂತೆ ತಂಬಾಕು ಉತ್ಪನ್ನ ಮಾರಾಟಗಾರರಿಗೂ ಟೇಡ್ ಲೈಸನ್ಸ್ ಕಡ್ಡಾಯಗೊಳಿಸುವಂತೆ ಆರೋಗ್ಯ ಇಲಾಖೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪತ್ರ ಬರೆದಿದೆ.

ಕಾಯ್ದೆ ಅನುಷ್ಠಾನ: ಕೋಟ್ಪಾ ಕಾಯ್ದೆ ಕಟ್ಟುನಿಟ್ಟಿನ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಈಗಾಗಲೇ ತಂಡ ರಚಿಸಿದ್ದು, ಕಾರ್ಯ ಪ್ರವೃತ್ತವಾಗಿವೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾಯ್ದೆ ಜಾರಿಗೆ ಪಿಡಿಒ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುತ್ತದೆ.

2 ತಂಬಾಕು ಕೋಶ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋಟ್ಪಾ ಕಾಯ್ದೆ ಮತ್ತಷ್ಟು

ಪರಿಣಾಮಕಾರಿಯಾಗಿ ಜಾರಿಗೆ ತರಲು 2 ತಂಬಾಕು ಕೋಶ ರಚನೆಗೆ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಕೋಶದಲ್ಲಿ ಒಬ್ಬ ಜಿಲ್ಲಾ ಸಂಯೋಜಕ, ಒಬ್ಬ ಆಪ್ತ ಸಮಾಲೋಚಕ, ಒಬ್ಬ ಸಾಮಾಜಿಕ ಕಾರ್ಯಕರ್ತರಿದ್ದು, ವೈದ್ಯರ ಜತೆ ಕೆಲಸ ನಿರ್ವಹಿಸುತ್ತಾರೆ.

ಸೈಬರ್ ಕ್ರೈಂಗೆ ಪತ್ರ: ಆನ್‌ಲೈನ್‌ನಲ್ಲಿ ಹೆಚ್ಚುತ್ತಿರುವ ಇ-ಸಿಗರೇಟು ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ಆರೋಗ್ಯ ಇಲಾಖೆ ಸೈಬರ್ ಕ್ರೈಂಗೆ ಪತ್ರ ಬರೆದಿದೆ. 2014-16 ರ ಅವಧಿಯಲ್ಲಿ ಇ-ಸಿಗರೇಟಿನ ಆನ್ಲೈನ್ ವಹಿವಾಟು ಹತೋಟಿಯಲ್ಲಿತ್ತು. ಇತ್ತೀ

ಚಿನ ದಿನಗಳಳ್ಲಿ ಮಾರಾಟ ಉಪಟಳ ಹೆಚ್ಚುತ್ತಿರುವ ಮಾಹಿತಿ ಇದೆ.

ಕೋಟ್ಪಾ ಕಾಯ್ದೆಯಡಿ ವಿಧಿಸಲಾಗುವ ದಂಡವನ್ನು ಜನರು ಲಘುವಾಗಿ ಪರಿಗಣಿಸಿರುವುದರಿಂದ ದಂಡದ ಪ್ರಮಾಣ ಹೆಚ್ಚಿಸಿ ಧೂಮಪಾನಕ್ಕೆ ಕಡಿವಾಣ ಹಾಕುವ ಚಿಂತನೆ ನಡೆದಿದೆ ಎಂದು  ರಾಷ್ಟ್ರೀಯ ತಂಬಾಕು ಅಭಿಯಾನ ನೋಡಲ್ ಅಧಿಕಾರಿ ಡಾ. ಶಿವರಾಜ್ ಹೇಳಿದ್ದಾರೆ

ಅಗ್ರಸ್ಥಾನದಲ್ಲಿ ರಾಜ್ಯ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವಲ್ಲಿ ಮತ್ತು ಧೂಮಪಾನ ಕುರಿತು ಅರಿವು ಮೂಡಿಸುವಲ್ಲಿ ರಾಷ್ಟ್ರದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ. 2016 ರಲ್ಲಿ ಶೇ. 28 ರಷ್ಟಿದ್ದ ಧೂಮಪಾನಿಗಳ ಸಂಖ್ಯೆ ಈಗ ಶೇ. 22 ಕ್ಕೆ ಇಳಿದಿದೆ.

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos