ಜನಸೇನಾ ಪವನ್ ‘ಪಂಚ್’ಗೆ ಅಲಿ ಕೌಂಟರ್

ಜನಸೇನಾ ಪವನ್ ‘ಪಂಚ್’ಗೆ ಅಲಿ ಕೌಂಟರ್

ಹೈದರಾಬಾದ್, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಟಾಲಿವುಡ್​ ಸ್ಟಾರ್​ ಪವನ್ ಕಲ್ಯಾಣ್​ ಹಾಗೂ ಅಲಿ ನಡುವೆ ವೈಮನಸ್ಸು ಮೂಡಿದೆ. ತಮ್ಮ ಪಕ್ಷಕ್ಕೆ ಬರಲಿಲ್ಲ ಎಂದು ಪವರ್​ ಸ್ಟಾರ್​, ಅಲಿ ಮೇಲೆ ಮುನಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಯಾರು ಯಾವಾಗ ಬೇಕಾದ್ರೂ ಶತ್ರು-ಮಿತ್ರಗಳಾಗಬಹುದು. ನಿನ್ನೆ ಮೊನ್ನೆ ಸಹೋದರರಂತೆ ಹೆಗಲ ಮೇಲೆ ಕೈ ಹಾಕೋಂಡು ತಿರುಗುತ್ತಿದ್ದವರು, ರಾಜಕೀಯ ಅಖಾಡಕ್ಕಿಳಿದ ಮೇಲೆ ಬದ್ಧವೈರಿಗಳಂತೆ ಬದಲಾಗುವುದು ರಾಜಕೀಯದಲ್ಲಿ ಹೊಸದೇನಲ್ಲ. ಇದೀಗ ಇಂತಹ ಪ್ರಸಂಗ ಟಾಲಿವುಡ್​​ನ ಸೂಪರ್​ ಸ್ಟಾರ್​ ಪವನ್ ಕಲ್ಯಾಣ್​ ಹಾಗೂ ಫೇಮಸ್ ಹಾಸ್ಯನಟ ಅಲಿ ನಡುವೆ ಏರ್ಪಟ್ಟಿದೆ. ಈ ಉಭಯ ತಾರೆಯರು ಚಿತ್ರರಂಗಕ್ಕಷ್ಟೆ ಸೀಮಿತಗೊಂಡಿಲ್ಲ. ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಪವರ್​ ಸ್ಟಾರ್​ ಪವನ್ ಕಲ್ಯಾಣ್​ ಜನಸೇನಾ ಪಕ್ಷ ಕಟ್ಟಿಕೊಂಡು ರಾಜಕೀಯ ಅಖಾಡಕ್ಕೆ ಧುಮಿಕಿದ್ದಾರೆ. ಇತ್ತ ಅಲಿ ಕೂಡ ಮೊನ್ನೆಯಷ್ಟೆ ಟಿಡಿಪಿಗೆ ಗುಡ್​ ಬೈ ಹೇಳಿ, ಜಗನ್ ಮೋಹನ್​ ರೆಡ್ಡಿಯ ‘ವೈಎಸ್​ಆರ್​​​ಸಿಪಿ’ ಪಕ್ಷ ಅಪ್ಪಿಕೊಂಡಿದ್ದಾರೆ. ಇದು ಪವನ್ ಕಲ್ಯಾಣ್​ ಅಸಮಾಧಾನಕ್ಕೆ ಕಾರಣವಾಗಿದೆ. ಅವರು ತಮ್ಮ ಬೇಸರವನ್ನು ನಿನ್ನೆ ರಾಜಮಂಡ್ರಿಯಲ್ಲಿ ನಡೆದ ಸಭೆಯಲ್ಲಿ ಓಪನ್ ಆಗಿಯೇ ಹೊರಹಾಕಿದ್ದಾರೆ. ಪವನ್ ಹಾಗೂ ಅಲಿ ಅವರದು ಹಳೇ ದೋಸ್ತಿ. ಸಾಕಷ್ಟು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಕೇವಲ ಆನ್​ಸ್ಕ್ರೀನ್ ಮಾತ್ರವಲ್ಲ, ಆಫ್​ಸ್ಕ್ರೀನ್​ನಲ್ಲೂ ಇವರಿಬ್ಬರು ಉತ್ತಮ ಸ್ನೇಹಿತರು. ಇದೇ ಕಾರಣಕ್ಕೆ ತಮ್ಮ ಪಕ್ಷಕ್ಕೆ ಅಲಿ ಆಗಮಿಸಬಹುದು ಎಂದು ಪವನ್ ನಿರೀಕ್ಷೆಯಲ್ಲಿದ್ದರು. ಆದರೆ, ಅಲಿ ಮಾತ್ರ ವೈಎಸ್​​ಆರ್​​ಸಿಪಿಗೆ ಜೈ ಎನ್ನುವ ಮೂಲಕ ಪವನ್​ ಕಲ್ಯಾಣ್​ ಅವರಿಗೆ ನಿರಾಸೆ ಮೂಡಿಸಿದ್ರು. ನಿನ್ನೆ ಈ ಬಗ್ಗೆ ಮಾತನಾಡಿರುವ ಪವನ್ ಕಲ್ಯಾಣ್​, ಅಲಿ ಸೂಚಿಸಿದ ವ್ಯಕ್ತಿಗೆ ನಮ್ಮ ಪಕ್ಷದಿಂದ ನರಸ್​ರಾವ್​ಪೇಟ್​ನಿಂದ ಎಂಪಿ ಟಿಕೆಟ್ ನೀಡಿದೆ. ಆದರೆ, ಅಲಿ ಮಾತ್ರ YSRCP ಸೇರಿದ. ಇದಕ್ಕೆ ಕಾರಣ ರಾಜಕೀಯದಲ್ಲಿ ನನಗಿಂತ ಜಗನ್ ಪ್ರಭಾವಿ ಎಂದು ಅಲಿ ನಂಬಿರುವುದು. ಜತೆಗೆ ಆತ ರಾಜ್ಯದ ಜನರನ್ನು ನಂಬಿದ್ದಾನೆ ಹೊರತು ನಮ್ಮ ಗೆಳೆತನವಲ್ಲ ಎಂದಿದ್ದಾರೆ. ಇನ್ನು ಮಿತ್ರನ ಚುಚ್ಚು ಮಾತುಗಳಿಗೆ ಅಲಿ ವಿಡಿಯೋ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ. ಪವನ್ ಕಲ್ಯಾಣ್ ತಮ್ಮ ಪಾರ್ಟಿಗೆ ಸೇರುವಂತೆ ಎಂದೂ ಆಹ್ವಾನ ನೀಡಿಲ್ಲ ಎಂದಿದ್ದಾರೆ. ಜತೆಗೆ ನಾನೇಕೆ YSRCP ಎಂಬುದಕ್ಕೆ ಕಾರಣವನ್ನೂ ಕೇಳಿಲ್ಲ. ಇನ್ನು ಪವನ್ ‘ಸಹಾಯ’ದ ಮಾತಿಗೆ ತಿರುಗೇಟು ನೀಡಿರುವ ಅವರು, ಆತ ನಂಗೇನು ಹಣ ನೀಡಿದ್ದಾರೆಯೇ ಇಲ್ಲವೇ ಚಿತ್ರಗಳಿಗೆ ಅಭಿನವಕಾಶ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos