ಪೆವಿಲಿಯನ್ ಪರೆಡ್ ನಡೆಸಿದ  ಹರಿಣಗಳು

ಪೆವಿಲಿಯನ್ ಪರೆಡ್ ನಡೆಸಿದ  ಹರಿಣಗಳು

ರಾಂಚಿ, ಅ. 21 :  ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ  ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಭಾರಿ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಫ್ರಿಕಾವನ್ನು ಕೇವಲ 162 ರನ್ ಗಳಿಗೆ ಕಟ್ಟಿ ಹಾಕಿದ ಭಾರತ 335 ರನ್ ಮುನ್ನಡೆ ಗಳಿಸಿದೆ. ಭಾರತ ಆಫ್ರಿಕಾ ಮೇಲೆ ಮತ್ತೆ ಫಾಲೋ ಆನ್ ಹೇರಿದೆ.

ದ್ವಿತಿಯ ಮುಕ್ತಾಯಕ್ಕೆ 9 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಹರಿಣಗಳು ಬ್ಯಾಟಿಂಗ್ ಸಂಕಷ್ಟ ಮುಂದುವರಿಯಿತು. ನಾಯಕ ಡುಪ್ಲೆಸಿಸ್ ಇಂದು ಬೇಗನೆ ವಿಕೆಟ್ ಒಪ್ಪಿಸಿದರು. 4ನೇ ವಿಕೆಟ್ ಗೆ ಜೊತೆಯಾದ ಜುಬಾಯರ್ ಹಂಜಾ ಮತ್ತು ತೆಂಬ ಬವುಮಾ 91 ರನ್ ಗಳ ಜೊತೆಯಾಟ ನಡೆಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು.

ಹಂಜಾ 62 ರನ್ ಮಾಡಿದ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಬವುಮಾ 32 ರನ್ ಗಳಿಸಿದರೆ ಕೊನೆಯಲ್ಲಿ ಬಾಲಂಗೋಚಿಗಳ ಜೊತೆ ಆಡಿದ ಜಾರ್ಜ್ ಲಿಂಡೆ 37 ರನ್ ಗಳಸಿದರು. ಭಾರತದ ಪರ ಉಮೇಶ್ ಯಾದವ್ ಮೂರು ವಿಕೆಟ್ ಪಡೆದರೆ, ಶಮಿ, ಜಡೇಜಾ, ನದೀಂ ಎರಡು ವಿಕೆಟ್ ಪಡೆದರು.

 

ಫ್ರೆಶ್ ನ್ಯೂಸ್

Latest Posts

Featured Videos