ಪತ್ರದ ಬರೆದು ಹಾಕಿದ ಬಾಟಲಿ ಪತ್ತೆ

ಪತ್ರದ ಬರೆದು ಹಾಕಿದ ಬಾಟಲಿ ಪತ್ತೆ

ರಷ್ಯಾ, ಆ.13 : 50 ವರ್ಷಗಳ ಹಿಂದೆ ರಷ್ಯಾ ನಾವಿಕನೊಬ್ಬ ಪತ್ರ ಬರೆದು ಹಾಕಿದ ಬಾಟಲಿ ಸಮುದ್ರಕ್ಕೆ ಎಸೆದಿದ್ದ. 50 ವರ್ಷಗಳ ನಂತರವೂ ಆ ಬಾಟಲಿಯಾಗಲೀ ಅಥವಾ ಅದರೊಳಗಿನ ಪತ್ರಕ್ಕಾಗಲೀ ಯಾವುದೇ ಹಾನಿಯಾಗಿಲ್ಲ..! ರಷ್ಯಾದ ನಾವಿಕನೊಬ್ಬ 50 ವರ್ಷಗಳ ಹಿಂದೆ ಅಂದರೆ ಜೂನ್ 20, 1969 ರಂದು ಪತ್ರವನ್ನು ಬರೆದು ಅದನ್ನು ಬಾಟಲಿಯಲ್ಲಿಟ್ಟು ಸಮುದ್ರಕ್ಕೆ ಬಿಸಾಡಿದ್ದ.
ಬಾಟಲಿ ಅಮೆರಿಕಾದ ಅಲಾಸ್ಕಾದ ಟೈಲರ್ ಇವಾನೋಫ್ ಕೈಗೆ ಸಿಕ್ಕಿದೆ. ಇತ್ತೀಚೆಗೆ ಇವಾನೋಫ್ ಪೆಸಿಫಿಕ್ ಸರೋವರದಲ್ಲಿ ಹೋಗುತ್ತಿದ್ದಾಗ ಈ ಬಾಟಲಿ ಕಂಡಿದೆ. ತಕ್ಷಣ ಅದರ ಬಳಿಗೆ ಹೋಗಿ ಪರಿಶೀಲಿಸಿದಾಗ ಅದರೊಳಗೊಂದು ಕಾಗದದ ಚೂರು ಇದ್ದದ್ದು ಕಂಡಿದೆ. ಕುತೂಹಲದಿಂದಲೇ ಓಪನ್ ಮಾಡಿ ನೋಡಿದಾಗ ಅದು ಪತ್ರವಾಗಿತ್ತು. ಆದರೆ, ಪತ್ರ ರಷ್ಯನ್ ಭಾಷೆಯಲ್ಲಿದ್ದುದರಿಂದ ಆತನಿಗೆ ಓದಲು ಸಾಧ್ಯವಾಗಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos