ಪತ್ನಿಯ ಆಸೆ ಈಡೇರಿಸಿದ ಶಿಕ್ಷಕ

ಪತ್ನಿಯ ಆಸೆ ಈಡೇರಿಸಿದ ಶಿಕ್ಷಕ

ಜೈಪುರ, ಸೆ. 1 : ರಾಜಸ್ಥಾನದ ಶಿಕ್ಷಕರೊಬ್ಬರು ತಮ್ಮ ನಿವೃತ್ತಿಯ ದಿನ ಪತ್ನಿಯ ಆಸೆಯನ್ನು ಈಡೇರಿಸಿದ್ದಾರೆ. ಒಮ್ಮೆ ಹೆಲಿಕಾಪ್ಟರ್ ನಲ್ಲಿ ಕುಳಿತಕೊಳ್ಳಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದೀಗ ಶಿಕ್ಷಕ ತಮ್ಮ ನಿವೃತ್ತಿಯ ಹಣದಿಂದ ಪತ್ನಿಯ ಆಸೆ ಪೂರ್ಣ ಮಾಡಿದ್ದಾರೆ.
ರಮೇಶ್ ಚಾಂದ್ ಮೀನಾ ಪತ್ನಿಗಾಗಿ ಹೆಲಿಕಾಪ್ಟರ್ 3.70 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್ ಮಾಡಿದ್ದರು. 18 ನಿಮಿಷದ ನಮ್ಮ ಪ್ರಯಾಣ ಅದ್ಭುತವಾದ ಅನುಭವವನ್ನು ನೀಡಿದೆ.
ಉಡುಗೆ, ಸನ್ ಗ್ಲಾಸ್ ತೊಟ್ಟ ಪತ್ನಿ ಮತ್ತು ಮೊಮ್ಮಗನೊಂದಿಗೆ ತಮ್ಮ ಮೊದಲು ವಾಯುಯಾನ ಮಾಡಿದ್ದಾರೆ. ತಮ್ಮ ಶಾಲೆಯ ಬಳಿಯಿಂದ ಸ್ವಗ್ರಾಮ ಮಲವಾಲಿಗೆ ಪ್ರಯಾಣಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos