ಮಗುವನ್ನೇ ಕೊಂದ ತಾಯಿ

ಮಗುವನ್ನೇ ಕೊಂದ ತಾಯಿ

ಕೊಪ್ಪಳ, ಸೆ. 10 : ಪತಿಯ ಮೇಲಿನ ಕೋಪದ ಭರದಲ್ಲಿ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಕತ್ತು ಹಿಸುಕಿ ಅಮಾನುಷವಾಗಿ ಕೊಂದಿರುವ ಘಟನೆ ಕೊಪ್ಪಳದ ಕಾರಟಗಿ ತಾಲೂಕು ಸೋಮನಾಳ ಗ್ರಾಮದಲ್ಲಿ ನಡೆದಿದೆ.
ಅಭಿನವ ಕೊಲೆಗೀಡಾಗಿರುವ ಮಗುವಾಗಿದ್ದು ಕವಿತಾ ಅಲಿಯಾಸ್ ಪ್ರತಿಮಾ (24) ಆರೋಪಿ ತಾಯಿಯಾಗಿದ್ದಾಳೆ. ಕುಟುಂಬ ಕಲಹದ ಕಾರಣಕ್ಕೆ ಹದಿನಾರು ತಿಂಗಳ ಮಗುವನ್ನು ಕೊಂದ ಪ್ರತಿಮಾಳನ್ನು ಕಾರಟಗಿ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos