ಪಾರ್ಟಿ ಮಾಡಂಗಿಲ್ಲ, ಮೆಟ್ರೋ ಹತ್ತಂಗಿಲ್ಲ..!

ಪಾರ್ಟಿ ಮಾಡಂಗಿಲ್ಲ, ಮೆಟ್ರೋ ಹತ್ತಂಗಿಲ್ಲ..!

ಬೆಂಗಳೂರು,ಡಿ. 23 : ನಗರದಲ್ಲಿರುವ ಉದ್ಯಾನವನಗಳಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ನೆಪದಲ್ಲಿ ಪಾರ್ಕ್ಗಳಲ್ಲಿ ಮೋಜು-ಮಸ್ತಿ ಮಾಡುವುದು, ಕುಡಿದು ಹುಚ್ಚಾಟ ಮಾಡಿದರೆ ಪೊಲೀಸರ ಅತಿಥಿಯಾಗಬೇಕಾಗುತ್ತದೆ. ಸ್ವಚ್ಛತೆ ಹಾಗೂ ಸುರಕ್ಷತೆ ಉದ್ದೇಶದಿಂದ ಪಾಲಿಕೆ ಉದ್ಯಾನವನಗಳಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್ ಟ್ವಿಟ್ ಮಾಡಿದ್ದಾರೆ.

ನಗರದಲ್ಲಿರುವ ಎಲ್ಲ ಉದ್ಯಾನವನಗಳನ್ನು ಕ್ರಿಸ್ಮಸ್ ಮತ್ತು ಡಿ.31ರಂದು 9 ಗಂಟೆಯೊಳಗೆ ಬಂದ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಪಾರ್ಕ್ಗಳಲ್ಲಿ ಹೊಸ ವರ್ಷ ಆಚರಿಸುವ ನೆಪದಲ್ಲಿ ಮೋಜು-ಮಸ್ತಿ ಮಾಡುವುದು, ಕುಡಿದು ಸ್ವಚ್ಛತೆ ಹಾಳು ಮಾಡುವುದು, ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಿದರೆ ಪೊಲೀಸರ ಕ್ರಮ ಎದುರಿಸಬೇಕಾಗುತ್ತದೆ ಎಂದು ಅನಿಲ್ಕುಮಾರ್ ಎಚ್ಚರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos