ಸಲಿಂಗ ವಿವಾಹಕ್ಕೆ ತೈವಾನ್ ಸಂಸತ್ತು ಅನುಮತಿ..!

ಸಲಿಂಗ ವಿವಾಹಕ್ಕೆ  ತೈವಾನ್ ಸಂಸತ್ತು ಅನುಮತಿ..!

ತೈಪೆ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ :  ಸಲಿಂಗ ವಿವಾಹಕ್ಕೆ ಅನುಮತಿ ನೀಡುವ  ಕಾನೂನಿಗೆ ತೈವಾನ್‌ ಸಂಸತ್ತು ಅನುಮೋದನೆ ನೀಡಿದೆ. ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದೆ. ಮಸೂದೆ ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡಿದ್ದು, ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ತೈವಾನ್‌ ಏಷ್ಯಾದಲ್ಲೇ ಮೊದಲ ದೇಶ ಎಂಬ ಇತಿಹಾಸ ಸೃಷ್ಟಿಸಿದೆ.

ಈ ಕುರಿತು ದ್ವೇಷ ಭಾವನೆ ಹೊಂದಿದ ವಿರೋಧಿ ದಿನಾಚರಣೆಯಂದೇ ಸಲಿಂಗ ವಿವಾಹಕ್ಕೆ ಅನುಮತಿ ನೀಡುವ ಮಸೂದೆಯನ್ನು ತೈವಾನ್‌ ಸಂಸತ್ತು ಅನುಮೋದನೆಗೊಳಿಸಿದೆ. ಒಂದೇ ಲಿಂಗದ ಮದುವೆಗೆ ಕಾನೂನು ಮಾನ್ಯತೆ ನೀಡಿದೆ.  ಹಾಗಾಗಿ, ಒಂದೇ ಲಿಂಗದ ಪುರುಷರು ಅಥವಾ ಮಹಿಳೆಯರು ಸಹ ತಮ್ಮ ವಿವಾಹವನ್ನು ನೋಂದಾಯಿಸಬಹುದಾಗಿದೆ. ಸಲಿಂಗಕಾಮಿಗಳು  ವಿಜಯೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos