ಬಡತದಲ್ಲಿ ಬೆಳೆದು ಸಂಸದೆಯಾದ ‘ರಮ್ಯ ಹರಿದಾಸ್’!

ಬಡತದಲ್ಲಿ ಬೆಳೆದು ಸಂಸದೆಯಾದ ‘ರಮ್ಯ ಹರಿದಾಸ್’!

ಕೇರಳಮೇ. 29, ನ್ಯೂಸ್‍ ಎಕ್ಸ್ ಪ್ರೆಸ್‍: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ 52 ಸಂಸದರ ಪೈಕಿ ಕೇರಳದ ರೇಮ್ಯಾ ಹರಿದಾಸ್ ಕೂಡ ಒಬ್ಬರು.  ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರೇಮ್ಯಾ ಅನೇಕ ದಾಖಲೆ ಬರೆದಿದ್ದಾರೆ. ಕೇರಳದಿಂದ ಸಂಸತ್ ಪ್ರವೇಶ ಮಾಡಿದ ಮಹಿಳೆಯರಲ್ಲಿ ರೇಮ್ಯಾ ಎರಡನೇಯವರು. ಬಡತನದಿಂದ ಸಂಸತ್ ಪ್ರವೇಶ ಮಾಡಿದ ರೇಮ್ಯಾ ಕಥೆ ಸ್ಪೂರ್ತಿದಾಯಕವಾಗಿದೆ. ದಿನಗೂಲಿ ನೌಕರೆಯಾಗಿದ್ದ ರೇಮ್ಯಾ 32ನೇ ವಯಸ್ಸಿನಲ್ಲಿ ಸಂಸತ್ ಪ್ರವೇಶ ಮಾಡಿದ್ದಾರೆ. ಅವರ ಒಟ್ಟು ಆಸ್ತಿ 22 ಸಾವಿರ ರೂ. ಅವರ ತಾಯಿ ಕೂಡ ಕಾಂಗ್ರೆಸ್ ಸದಸ್ಯೆಯಾಗಿದ್ದರು. ರೇಮ್ಯಾ ತಾಯಿ ಬಟ್ಟೆ ಹೊಲಿಯುವ ಕೆಲಸ ಮಾಡ್ತಿದ್ದರು.

ಬಡತನವನ್ನು ಹತ್ತಿರದಿಂದ ನೋಡಿದ್ದೇನೆ. ಆಗ ಗುಡಿಸಿಲಿನಲ್ಲಿ ಇರುತ್ತಿದ್ದೆವು. ಈಗ ಸರ್ಕಾರ ನೀಡಿದ ಮನೆಯಲ್ಲಿರುತ್ತೇವೆ. ಹೆಣ್ಮಕ್ಕಳನ್ನು ಹೊರಗೆ ಕಳುಹಿಸಲು ಆಗಿನ ಕಾಲದಲ್ಲಿ ಹೆದರುತ್ತಿದ್ದರು. ಆದ್ರೆ ನನ್ನ ಪಾಲಕರು ಜೀವನದಲ್ಲಿ ಮುಂದೆ ಬರುವುದನ್ನು ಕಲಿಸಿದ್ದರು. ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿದ್ದರು ಎನ್ನುತ್ತಾರೆ ರೇಮ್ಯಾ.

ಫ್ರೆಶ್ ನ್ಯೂಸ್

Latest Posts

Featured Videos