ಪಾರ್ಲಿಮೆಂಟ್ ನಲ್ಲಿ ಪ್ಲಾಸ್ಟಿಕ್ ಬಾಟಲಿಗೆ ‘ನೋ ಎಂಟ್ರಿ’

ಪಾರ್ಲಿಮೆಂಟ್ ನಲ್ಲಿ ಪ್ಲಾಸ್ಟಿಕ್ ಬಾಟಲಿಗೆ ‘ನೋ ಎಂಟ್ರಿ’

ನವದೆಹಲಿ, ಸೆ. 25 : ಸಂಸತ್ ಭವನದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ. ಸಂಸದರು ಮತ್ತು ಭವನದ ಅಧಿಕಾರಿಗಳಿಗೆಂದೇ ಪ್ರತಿದಿನ 2000 ರೈಲ್ ನೀರನ್ನು ಖರೀದಿಸಲಾಗುತ್ತಿತ್ತು. ಆದರೆ, ಇದರಿಂದಾಗಿ ಸಂಸತ್ ಭವನದಲ್ಲಿ ನೀರಿನ ಬಾಟಲಿಯ ರಾಶಿಯಾಗಿದ್ದಲ್ಲದೇ, ಈ ಪ್ಲಾಸ್ಟಿಕ್ ಬಾಟಲಿ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂಬ ಕಾರಣದಿಂದ ಸ್ಪೀಕರ್ ಓಂ ಬಿರ್ಲಾ ನೀರಿನ ಬಾಟಲಿ ಸೇರಿದಂತೆ ಪ್ಲಾಸ್ಟಿಕ್ ನ ಇನ್ನಿತರೆ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದರು.
ಇದರ ಪರಿಣಾಮ ಸಂಸತ್ ಭವನದಲ್ಲಿ ಈಗ ಯಾವುದೇ ಸಭೆ ಸಮಾರಂಭಗಳಾದರೂ ಗಾಜಿನ ಲೋಟಗಳಲ್ಲಿ ನೀರನ್ನು ಪೂರೈಕೆ ಮಾಡಲಾಗುತ್ತಿದ್ದರೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಿಂದಲೇ ಬಾಟಲಿಗಳಲ್ಲಿ ನೀರು ತರುವಂತಾಗಿದೆ. ಪ್ರವೇಶ ದ್ವಾರದಲ್ಲಿಯೇ ಪ್ಲಾಸ್ಟಿಕ್ ಬಾಟಲಿ ಅಥವಾ ವಸ್ತುಗಳನ್ನು ಕೊಂಡೊಯ್ಯಲಾಗುತ್ತಿದೆಯೇ ಎಂಬುದನ್ನು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಆಯ್ದ ಸ್ಥಳಗಳಲ್ಲಿ ಜನರಿಗೆ ಸುಲಭವಾಗಿ ನೀರು ಲಭ್ಯವಾಗುವಂತೆ ನೀರಿನ ಪಾತ್ರೆಗಳನ್ನು ಇಡಲು ನಿರ್ಧರಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos