ರಾಜಕೀಯ ಸನ್ಯಾಸ ಪಡೆದುಕೊಂಡರಾ ಪರಮೇಶ್ವರ??

ರಾಜಕೀಯ ಸನ್ಯಾಸ ಪಡೆದುಕೊಂಡರಾ ಪರಮೇಶ್ವರ??

ತುಮಕೂರು, ಡಿ. 26: ರಾಜಕೀಯದಲ್ಲಿ ಯಾವಾಗ ಯಾವ ತಿರುವು ಪಡೆದುಕೊಳ್ಳತ್ತವೆಂದು ಹೇಳಲಾಗದು. ಒಂದು ವರ್ಷ ಮೂರು ತಿಂಗಳ ಕಾಲ ಜೀರೋ ಟ್ರಾಫಿಕ್ ಉಪ ಮುಖ್ಯ ಮುಂತ್ರಿ ಎಂಬ ಟೀಕೆಗೆ ಗುರಿಯಾಗಿದ್ದ ಮಾಜಿ ಸಚಿವ ಡಾ.ಜಿ. ಪರಮೇಶ್ವರ ರಾಜಕೀಯದಿಂದ ಸನ್ಯಾಸ ದೀಕ್ಷೆ ತೆಗೆದುಕೊಂಡು ತೆರೆ ಮರೆಗೆ ಸರಿದು ಬಿಟ್ಟಿದ್ದಾರಾ? ಎನ್ನುವಂತಹ ಅನುಮಾನಗಳು ರಾಜಕೀಯ ವಲಯದಲ್ಲೀಗ ಕೇಳಿ ಬರುತ್ತಿರುವ ಚರ್ಚಿತ ವಿಷಯವಾಗಿದೆ.  ಉಪಚುನಾವಣೆ ವೇಳೆ ಹಳೆ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಬಹಿರಂಗವಾಗಿ ಅಸಮದಾನ ಹೊರಹಾಕಿದ್ದ ಜಿ.ಪರಮೇಶ್ವರ್ ಕಾಂಗ್ರೆಸ್ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಹುಣಸೂರಿಗೆ ಹೋಗಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಬಿಟ್ಟರೆ ಬೇರೆಲ್ಲೂ ಕಾಂಗ್ರೆಸ್ ನಾಯಕರ ಜತೆಯಲ್ಲಿ ಭಹಿರಂಗ ಸಭೆಗಳಲ್ಲಿ ಕಾಣಿಸಿಕೊಳ್ಳದೆ ದೂರ ಉಳಿದರು.

ತುಮಕೂರು ಜಿಲ್ಲೆಯ ಮೀಸಲು ಕ್ಷೇತ್ರ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ 2008 ರಲ್ಲಿ ಹತ್ತು ಸಾವಿರ ಮತಗಳ ಅಂತರದಿಂದ ಆಯ್ಕೆಯಾದ ಪರಮೇಶ್ವರ 2013ರ ಚುನಾವಣೆಯಲ್ಲಿ ತಾವೇ ಮಾಡಿಕೊಂಡ ಎಡವಟ್ಟು ಹಾಗೂ ಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಕಡೆಗಣಿಸಿದ್ದಲ್ಲದೆ ಮತದಾರರಿಂದ ಅಂತರ ಕಾಯ್ದುಕೊಂಡರಲ್ಲದೇ ಯಾವುದೇ ಅಭಿವೃದ್ದಿ ಕೆಲಸಗಳಿಗೆ ಆದ್ಯತೆ ನೀಡದ ಕಾರಣ ಮತದಾರರೇ ಸೊಲಿಸಿದ್ದು ಇತಿಹಾಸ ನಿರ್ಮಾಣವಾಗಿ ರಾಜ್ಯದೆಲ್ಲೆಡೆ ಕೊರಟಗೆರೆ ತಾಲೂಕು ಜನಪ್ರಿಯತೆ ಪಡೆದುಕೊಂಡಿತ್ತು.

2008ರ ಚುನಾವಣೆಯಲ್ಲಿ ಸೋಲಿಸಿದ ತಪ್ಪಿಗೆ ಮತ್ತು ಮುಖ್ಯಂತ್ರಿ ಹುದ್ದೆ ಕಳೆದುಕೊಂಡಿದ್ದಕ್ಕಾಗಿ ಈ ಸಾರಿಯಾದರೂ ಆಯ್ಕೆ ಮಾಡಿದರೆ ಮಂತ್ರಿ ಪದವಿ ಗಳಿಸಿ ತಾಲೂಕಿನ ಅಭಿವೃದ್ದಿ ಮಾಡುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಅಧಿಕಾರ ಪಡೆದ ಪರಮೇಶ್ವರ ಕ್ಷೇತ್ರವನ್ನೇ ಮರೆತು ಕೇವಲ ಅಧಿಕಾರದ ಕುರ್ಚಿಗಂಟಿಕೊಂಡರು ಬಿಟ್ಟರೆ ಇವರಿಗೆ ಅಧಿಕಾರ ಸಿಗಲು ಶ್ರಮಿಸಿದ ಮತದಾರರನ್ನು ಮತ್ತೆ ದೂರ ಮಾಡಿದ್ದಲ್ಲದೆ, ಅಭಿವೃದ್ಧಿಯೂ ಮರೀಚಿಕೆಯಾಗಿದೆ. ಸಾಮಾನ್ಯ ಜನ ಇವರನ್ನು ಮಾತನಾಡಿಸಲಾಗದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಜನರೇ ಸಾರ್ವಜನಿಕವಾಗಿ ಯಾಕಾದರೂ ಇಂತಹವರನ್ನು ಆಯ್ಕೆಮಾಡಿದೆವೆಂದು ಸಾರ್ವಜನಿಕವಾಗಿಯೇ ಜನ ಬೈದುಕೊಳ್ಳುತ್ತಿರುವ ಘಟನೆಗಳು  ಪ್ರತಿ ದಿನ ಕೇಳಿ ಬರುತ್ತಿವೆ.

ರಾಜ್ಯದ ಉಪ ಮುಖ್ಯ ಮಂತ್ರಿಯಾದ ಇವರು ತನ್ನ ಸುತ್ತಲೂ ಪೊಲೀಸ್ ಸರ್ಪಗಾವಲು ಹೆಣೆದುಕೊಂಡಿದ್ದು ಬಿಟ್ಟರೆ ಯಾವುದೇ ಶಾಶ್ವತ ಯೋಜನೆಗಳನ್ನ ತಾಲೂಕಿಗೆ ಘೋಷಣೆ ಮಾಡಲಿಲ್ಲ. ಇದೂ ಕೂಡಾ ಕ್ಷೇತ್ರದ ಜನತೆಯ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಗಿದೆ. ಇವರ ಗೆಲುವಿಗೆ ಕಾರಣರಾದ ಮಾಜಿ ಶಾಸಕ  ಕಾರಣರಗಿದ್ದ ಆಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ  ಕೆ ಎನ್ ರಾಜಣ್ಣ ಮೇಲೆ ತನ್ನ ಹಳೆ ಹಗೆ ತೀರಿಸಿಕೊಳ್ಳಲು ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್‌ಮಾಡಲು ಪರಮೆಶ್ವರ ಅವರೇ ಸಹಕಾರ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ರಾಜಣ್ಣ ಅವರ ಕೆಂಗಣ್ಣಿಗೆ ಗುರಿಯಾಗುವುದರ ಜತೆಗೆ ಸ್ವಪಕ್ಷಿಯರನ್ನು ಎದುರು ಹಾಕಿಕೊಂಡು ಅಜ್ಙಾತವಾಸಕ್ಕೆ ತೆರಳಿದ್ದಾರೆ ಎನ್ನುತ್ತಾರೆ ತುಮಕೂರಿನ ಅವರ ಆಪ್ತ ರಾಜಕೀಯ ಮೂಲಗಳು.

ದಾಖಲೆ ಅವಧಿಗೆ ಕೆಪಿಸಿಸಿ ಅಧ್ಯಕ್ಷ ಗಾದೆ ಅನುಭವಿಸಿದ ಪರಮೇಶ್ವರ ಪಕ್ಷವೆಂದರೆ ತಾಯಿ ಸಮಾನ ಎನ್ನುತ್ತಿದ್ದ ಪಕ್ಷವೀಗ ಸಾಕಗಿದೆ ಎನ್ನಲಾಗುತ್ತಿದೆ. ಐಟಿ ಇಲಾಖೆಯ ಶಾಕ್‌ನಿಂದ ಹೊರಬಂದಿರುವ ಪರಮೇಶ್ವರ ಅವರಿಗೆ ಅಧಿಕಾರ ಕಳೆದುಕೊಂಡಿದ್ದೂ ಕೂಡಾ ಒಂದು ರೀತಿಯ ಶಾಕ್ ಆಗಿದೆಯೆನ್ನುತ್ತಾರೆ ಅವರ ಆಪ್ತ ವಲಯ.ಮೈತ್ರಿ ಸರ್ಕಾರದ ಪತನದ ನಂತರ ನಾನೂ ವಿರೋಧ ಪಕ್ಷದ ನಾಯಕನಗಬೇಕೆಂಬ ಸೊಲ್ಲೆತ್ತಿದ್ದ ಪರಮೇಶ್ವರ ಇತ್ತೀಚೆಗೆ ಅಜ್ಞಾತವಾಸ ಸೇರಿಕೊಂಡಿರುವುದು ರಾಜಕೀಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಪ್ರಸ್ತುತ ಎಂಬಿ ಪಾಟೀಲ್,ಡಿಕೆಶಿ ಮತ್ತು ದಲಿತ ನಾಯಕ ಅವರು ಮುನ್ನೆಲೆಗೆ ಬಂದಿದ್ದಾರೆ ಆದರು ಯಾವಾಗಲೂ ಅಧಿಕರ ಬೇಕೆನ್ನುತ್ತಿದ್ದ ಪರಮೇಶ್ವರ ತೆರೆ ಮರೆಗೆ ಸರಿದಿರುವುದು ಅಚ್ಚರಿ ಮೂಡಿಸುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos