‘ಪಪ್ಪಾಯ ಹಣ್ಣು ತಿಂದ್ರೆ’ ಕ್ಯಾನ್ಸ್ ರ್ ದೂರ’

‘ಪಪ್ಪಾಯ ಹಣ್ಣು ತಿಂದ್ರೆ’ ಕ್ಯಾನ್ಸ್ ರ್ ದೂರ’

ಬೆಂಗಳೂರು, ಸೆ. 26 : ಕ್ಯಾನ್ಸರ್ ಅನ್ನುವ ಮಹಾಮಾರಿ. ಹೆಚ್ಚಿನ ಜನರನ್ನು ಕಾಡುತ್ತಲಿದೆ. ಕಾಯಿಲೆ ಕೆಲವೊಂದು ಸಂದರ್ಭದಲ್ಲಿ ನಾವೇ ತಂದುಕೊಂಡರೆ, ಇನ್ನು ಕೆಲವೊಮ್ಮೆ ಅದಾಗಿಯೇ ಬರುವುದು. ನಮ್ಮ ಜೀವನಶೈಲಿ, ಧೂಮಪಾನ ಮತ್ತು ಮದ್ಯಪಾನದಂತಹ ದುಶ್ಚಟಗಳಿಂದಾಗಿ ಕ್ಯಾನ್ಸರ್ ಬರುವುದು ಸಾಮಾನ್ಯ. ಹೀಗಾಗಿ ಪ್ರಕೃತಿದತ್ತವಾದ ಕೆಲವೊಂದು ಹಣ್ಣುಹಂಪಲುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಮಾರಕ ರೋಗದಂತಹ ಕ್ಯಾನ್ಸರ್ ಬರದಂತೆ ಕೂಡ ತಡೆಯುವುದು.
ಪೋಷಕಾಂಶಗಳ ಆಗರ
ನಾವು ಸೇವಿಸುವಂತಹ ಪ್ರತಿಯೊಂದು ಹಣ್ಣಿನಲ್ಲೂ ಹೆಚ್ಚಿನ ಪೋಷಕಾಂಶಗಳು ಇದೆ. ಅದೇ ರೀತಿಯಾಗಿ ಪಪ್ಪಾಯಿಯಲ್ಲಿ ಪೋಷಕಾಂಶಗಳು ತುಂಬಿಕೊಂಡಿದೆ ಮತ್ತು ಇದನ್ನು ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಸೇವಿಸಿಕೊಳ್ಳಿ. ಒಂದು ಪಪ್ಪಾಯಿ ತಿರುಳಿನಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲ ಹಾಗೂ ಸುಮಾರು 55 ಕ್ಯಾಲರಿ ಹೊಂದಿದೆ. ಇದರಲ್ಲಿ ಇರುವ ಇತರ
ವಿಟಮಿನ್ ಗಳು ಹಾಗೂ ಖನಿಜಾಂಶಗಳು ಹೀಗಿವೆ.
*3 ಗ್ರಾಂ ಆಹಾರದ ನಾರಿನಾಂಶ
*1 ಗ್ರಾಂ ಪ್ರೋಟೀನ್
*ದೈನಂದಿನ ಅಗತ್ಯತೆಗೆ ಬೇಕಾಗಿರುವ ಶೇ.31ರಷ್ಟು ವಿಟಮಿನ್ ಎ
*ಶೇ.144ರಷ್ಟು ವಿಟಮಿನ್ ಸಿಯ
*ಶೇ. 3ರಷ್ಟು ಕ್ಯಾಲ್ಸಿಯಂ
*ಶೇ.1ರಷ್ಟು ಕಬ್ಬಿನಾಂಶ
ಹಸಿ ಪಪ್ಪಾಯಿ ಕ್ಯಾನ್ಸರ್ ತಡೆ : ಹಸಿ ಪಪ್ಪಾಯಿಯಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಗುಣಗಳನ್ನು ಅಧ್ಯಯನಗಳು ಪತ್ತೆ ಹಚ್ಚಿದೆ. ಇದರಲ್ಲಿ ಅದ್ಭುತ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಇವೆ. ಇದು ದೇಹದಲ್ಲಿರುವ ಫ್ರೀ ರ್ಯಾಡಿಕಲ್ ನ್ನು ಹೊರಹಾಕುವುದು ಮತ್ತು ಕಡಿಮೆ ಮಾಡುವುದು. ಫ್ರೀ ರ್ಯಾಡಿಕಲ್ ಕ್ಯಾನ್ಸರ್ ಮತ್ತು ವಯಸ್ಸಾಗುವ ಲಕ್ಷಣ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿರುವುದು. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಗಾಂಶಗಳಿಗೆ ಆಗುವ ಹಾನಿ ತಪ್ಪಿಸುವುದು.

ಫ್ರೆಶ್ ನ್ಯೂಸ್

Latest Posts

Featured Videos