ಪರಪ್ಪನ ಜೈಲಿನಲ್ಲಿ ಗಾಂಜಾ!

ಪರಪ್ಪನ  ಜೈಲಿನಲ್ಲಿ ಗಾಂಜಾ!

ಬೆಂಗಳೂರು, ಅ. 9 : ಸಿಸಿಬಿ ಅಧಿಕಾರಿಗಳು ಬುಧವಾರ ನಸುಕಿನಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಹಿನ್ನಲೆ ಜೈಲಿನಲ್ಲಿ 37 ಚಾಕುಗಳು, ಕಠಾರಿ, ಗಾಂಜಾ ಸೇವನೆ ಮಾಡುವ ಕೊಳವೆಗಳು, ಮೊಬೈಲ್ ಸಿಮ್ ಕಾರ್ಡ್ ಪತ್ತೆಯಾಗಿವೆ. ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೈಲಿನಲ್ಲಿ ಕೈದಿಗಳು ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಸರ್ಪಗಾವಲು ಇರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಂಜಾ ಹಾಗೂ ಮಾರಕ ಅಸ್ತ್ರಗಳು ಪತ್ತೆಯಾದ ಬಗ್ಗೆ ಅನುಮಾನ ಮೂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos