ಪ್ಯಾಂಟ್ ಜೇಬಿನಲ್ಲಿದ್ದ ನೂತನ ಮೊಬೈಲ್ ಬ್ಲಾಸ್ಟ್..!

ಪ್ಯಾಂಟ್ ಜೇಬಿನಲ್ಲಿದ್ದ ನೂತನ ಮೊಬೈಲ್ ಬ್ಲಾಸ್ಟ್..!

ಬೆಂಗಳೂರು, ಏ. 20, ನ್ಯೂಸ್ ಎಕ್ಸ್ ಪ್ರೆಸ್ : ನೂತನವಾಗಿ ಖರೀದಿಸಲಾಗಿದ್ದ ಸ್ಮಾರ್ಟ್ ಫೋನ್ ಆಕಸ್ಮಿಕವಾಗಿ ಸ್ಫೋಟಗೊಂಡಿದ್ದು ತಾಯಿ-ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂದಗುಡಿ ಸಮೀಪ ಸಂಭವಿಸಿದೆ. ಗಂಗಾಧರ್ ಎಂಬುವರು ತಾಯಿಯೊಂದಿಗೆ ಆಂಧ್ರಪ್ರದೇಶಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ನಂದಗುಡಿ ಸಮೀಪ ಏಕಾಏಕಿ ಸ್ಫೋಟಗೊಂಡಿದ್ದು , ಬೈಕ್‍ನಿಂದ ತಾಯಿ-ಮಗ ಕೆಳಗೆ ಬಿದ್ದು ನರಳಾಡುತ್ತಿದ್ದರು. ಕೂಡಲೇ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದು , ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇತ್ತೀಚೆಗಷ್ಟೆ ಮೊಬೈಲ್ ಖರೀದಿಸಲಾಗಿದ್ದು , ಏಕಾಏಕಿ ಸ್ಫೋಟದಿಂದ ಗಂಗಾಧರ್ ಆತಂಕಕ್ಕೊಳಗಾಗಿದ್ದಾರೆ. ಮೊಬೈಲ್ ಖರೀದಿಸಿದ ಅಂಗಡಿ ಹಾಗೂ ಕಂಪೆನಿ ವಿರುದ್ಧ ನಂದಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos