ಪಾಂಡ್ಯ ಕೈ ತಪ್ಪಿದ ಟಿ20 ನಾಯಕತ್ವ! 

ಪಾಂಡ್ಯ ಕೈ ತಪ್ಪಿದ ಟಿ20 ನಾಯಕತ್ವ! 

ಬೆಂಗಳೂರು: 2024ರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇದರೊಂದಿಗೆ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಹಾರ್ದಿಕ್ ಪಾಂಡ್ಯ ಅವರ ಕನಸು ನುಚ್ಚುನೂರಾಗಿದೆ. ಏಕೆಂದರೆ ಕಳೆದ ಒಂದು ವರ್ಷದಿಂದ ಭಾರತ ಟಿ20 ತಂಡವನ್ನು ಪಾಂಡ್ಯ ಮುನ್ನಡೆಸುತ್ತಿದ್ದರು. ಹೀಗಾಗಿ ಟಿ20 ವಿಶ್ವಕಪ್​ನಲ್ಲೂ ಅವರೇ ನಾಯಕ ಎನ್ನಲಾಗಿತ್ತು.

ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯ ಮೂಲಕ ಇಬ್ಬರೂ ಕೂಡ ಕಂಬ್ಯಾಕ್ ಮಾಡಿದ್ದರು. ಈ ಕಂಬ್ಯಾಕ್ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾಗೆ ಟಿ20 ನಾಯಕತ್ವ ಒಲಿದಿದೆ.

ಅಷ್ಟೇ ಅಲ್ಲದೆ ಮುಂಬರುವ ಟಿ20 ವಿಶ್ವಕಪ್​ನಲ್ಲೂ ರೋಹಿತ್ ಶರ್ಮಾ ಮುಂದಾಳತ್ವದಲ್ಲೇ ಭಾರತ ತಂಡ ಕಣಕ್ಕಿಳಿಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ವಿಶ್ವಾಸದಲ್ಲಿದ್ದ ಹಾರ್ದಿಕ್ ಪಾಂಡ್ಯ ಕನಸು ಕೂಡ ಕಮರಿದೆ.

 

ಫ್ರೆಶ್ ನ್ಯೂಸ್

Latest Posts

Featured Videos