ಪಾಲಿಕೆಗೆ ಸೇರಿದ ಕಟ್ಟಡಗಳ ಋಣ ಮುಕ್ತ

ಪಾಲಿಕೆಗೆ ಸೇರಿದ ಕಟ್ಟಡಗಳ ಋಣ ಮುಕ್ತ

ಬೆಂಗಳೂರು, ಜು. 31 : ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಪಾಲಿಕೆಗೆ ಸೇರಿದ 5 ಪ್ರಮುಖ ಕಟ್ಟಡಗಳನ್ನು ಋಣ ಮುಕ್ತಗೊಳಿಸಲು ಕ್ರಮ ಕೈಗೊಳ್ಳುವಂತೆ ಮೇಯರ್ ಗಂಗಾಂಬಿಕೆ ಅವರಿಗೆ ಮಾಜಿ ಆಡಳಿತ ಪಕ್ಷ ನಾಯಕ ಎಂ ಶಿವರಾಜ್ ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ಮೇಯರ್ ಅವರಿಗೆ ಪತ್ರ ಬರೆದಿರುವ ಅವರು, ಹಿಂದಿನ ಆಡಳಿತ ಬರೆದಿರುವ ಅವರು, ಹಿಂದಿನ ಆಡಳಿತಾವಧಿಯಲ್ಲಿ ವಿವಿಧ ಬ್ಯಾಂಕುಗಳಿಂದ ಪಡೆದಿದ್ದ ಸಾಲಕ್ಕೆ ಪಾಲಿಕೆಯ ಆಸ್ತಿಗಳನ್ನು ಅಡಮಾನ ಮಾಡಿ ಉಳಿದಿರುವ 5 ಕಟ್ಟಡಗಳನ್ನು ಋಣಮುಕ್ತಗೊಳಿಸಬಕೆಂದು ತಿಳಿಸಿದ್ದಾರೆ.
ಹಿಂದಿನ ಆಡಳಿತಾವಧಿಯಲ್ಲಿ ವಿವಿಧ ಬ್ಯಾಂಕ್ ಗಳಿಂದ ಸಾಲ ಪಡಯಲು ಪಾಲಿಕೆಯ 11 ಆಸ್ತಿಗಳ ಪೈಕಿ ಈಗಾಗಲೇ 6 ಆಸ್ತಿಗಳನ್ನು ಋಣಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪಿಯುಬಿ ಕಟ್ಟಡ, ಕೆಆರ್ ಮಾರುಕಟ್ಟೆ, ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ
ಮತ್ತು ಕಲಾಸಿ ಪಾಳ್ಯ ಮಾರುಕಟ್ಟೆ ಆಸ್ತಿಗಳನ್ನು ತಮ್ಮ ಆಡಳಿತಾವಧಿಯ ಉಳಿದರಿರುವ 1 ತಿಂಗಳೊಳಗೆ ಋಣ ಮುಕ್ತಗೊಳಿಸಬೇಕೆಂದು ಮೇಯರ್ ಮನವಿ ಮಾಡಿದರು. ಬಿಬಿಎಂಪಿ ಆಯುಕ್ತರು, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ತಕ್ಷಣವೇ ಚರ್ಚೆ ನಡೆಸಿ ಬಾಕಿ ಉಳಿದರಿವ 5 ಕಟ್ಟಡಗಳನ್ನು ಕಾಂಗ್ರೆಸ್ ನ ಆಡಳಿತಾವಧಿಯಲೇ ಋಣ ಮುಕ್ತಗೊಳಿಸಬೇಕೆಂದು ಶಿವರಾಜ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos