ರಕ್ತ ಹೀನತೆ ಸಮಸ್ಯೆಗೆ ಪಾಲಕ್  ಪರಿಹಾರ

ರಕ್ತ ಹೀನತೆ ಸಮಸ್ಯೆಗೆ ಪಾಲಕ್  ಪರಿಹಾರ

ಬೆಂಗಳೂರು, ಡಿ. 11: ರಕ್ತಹೀನತೆ ಎಂದರೆ ಹತ್ತು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದಾದ ಒಂದು ತೊಂದರೆ. ವಿಶ್ವದಾದ್ಯಂತ ರಕ್ತಹೀನತೆಗೆ ಕಬ್ಬಿಣದ ಕೊರತೆಯೇ ಮುಖ್ಯ ಕಾರಣ ಎಂಬುದು ತಿಳಿದು ಬಂದಿದೆ.

ಅದರಲ್ಲು ಮಹಿಳೆಯರಲ್ಲಿ ಕಾಡುವ ಸಮಸ್ಯೆ ಎಂದರೆ ಅದು ರಕ್ತ ಹೀನತೆ. ಈ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ ಎದೆಯಲ್ಲಿ ನೋವು, ಸುಸ್ತು ಮೊದಲಾದ ಸಮಸ್ಯೆಗಳು ಕಂಡುಬರುತ್ತವೆ. ಹಾಗಾದರೆ ರಕ್ತಹೀನತೆ ಸಮಸ್ಯೆಯನ್ನು ನಿವಾರಣೆ ಮಾಡಲು ಏನು ಮಾಡಬಹುದು.

ಪ್ರತಿದಿನ ಪಾಲಕ್ ಜ್ಯೂಸ್ ಜೊತೆಗೆ ಜೇನನ್ನು ಮಿಕ್ಸ್ ಮಾಡಿ ಸೇವನೆ ಮಾಡಿ. ಇದರಿಂದ ದೇಹದಲ್ಲಿ ರಕ್ತ ಹೆಚ್ಚಿಸುತ್ತದೆ. ಇಲ್ಲವಾದರೆ ಪಾಲಕ್ ಸಾರು ಅಥವಾ ಚಟ್ನಿ ಮಾಡಿ ಸೇವನೆ ಮಾಡಬಹುದು.

ಪಾಲಕ್ನಲ್ಲಿ ಐರನ್, ವಿಟಾಮಿನ್ ಬಿ12 ಮತ್ತು ಫಾಲಿಕ್ ಆಸಿಡ್ ಇದೆ. ಇದರ ಜೊತೆ ಜೇನು ಮಿಕ್ಸ್ ಮಾಡಿ ಸೇವಿಸಿದರೆ ದೇಹದಲ್ಲಿ ಐರನ್ ಹೆಚ್ಚುತ್ತದೆ. ಎನಿಮಿಯಾ ಸಮಸ್ಯೆ ದೂರವಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos