“ಪಾಕಿಸ್ತಾನದ ಜೊತೆ ಮಾತುಕತೆ ಮೋದಿಯಿಂದ ಮಾತ್ರ ಸಾಧ್ಯ” ಇಮ್ರಾನ್ ಖಾನ್

“ಪಾಕಿಸ್ತಾನದ ಜೊತೆ ಮಾತುಕತೆ ಮೋದಿಯಿಂದ ಮಾತ್ರ ಸಾಧ್ಯ” ಇಮ್ರಾನ್ ಖಾನ್

ಇಸ್ಲಾಮಾಬಾದ್, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಮರದಲ್ಲಿ ಒಂದು ವೇಳೆ ಕಾಂಗ್ರೆಸ್ ಗೆದ್ದಿದ್ದೇ ಆದಲ್ಲಿ ಪಾಕಿಸ್ತಾನ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ತುಂಬಾ ಕಡಿಮೆ ಎಂದಿರುವ ಖಾನ್, ಮಾತುಕತೆ ನಡೆಸಿದರೆ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗುವ ಭಯ ಹೊಂದಿರುತ್ತದೆ ಎಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಮೋದಿ ಮತ್ತೆ ಪ್ರಧಾನಿ ಪಟ್ಟಕ್ಕೇರಿದರೆ ಉಭಯ ದೇಶಗಳ ಶಾಂತಿ ಮಾತುಕತೆಯ ಸಾಧ್ಯತೆ ಹೆಚ್ಚಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಲೋಕಸಮರದಲ್ಲಿ ಒಂದು ವೇಳೆ ಕಾಂಗ್ರೆಸ್ ಗೆದ್ದಿದ್ದೇ ಆದಲ್ಲಿ ಪಾಕಿಸ್ತಾನ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ತುಂಬಾ ಕಡಿಮೆ ಎಂದಿರುವ ಖಾನ್, ಮಾತುಕತೆ ನಡೆಸಿದರೆ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗುವ ಭಯ ಹೊಂದಿರುತ್ತದೆ ಎಂದಿದ್ದಾರೆ. ಲೋಕಸಭಾ ಚುನಾವಣೆ ಪಾಕಿಸ್ತಾನ ಪಾಲಿಗೂ ಮಹತ್ತರವಾಗಿದ್ದು ಬಿಜೆಪಿ ವಿಜಯ ಸಾಧಿಸಿದರೆ ಕಾಶ್ಮೀರ ಸಮಸ್ಯೆಯೂ ಬಗೆಹರಿಯುವ ವಿಶ್ವಾಸವನ್ನು ಇಮ್ರಾನ್ ಖಾನ್ ವ್ಯಕ್ತಪಡಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಮುಸ್ಲಿಮರು ನಿರಾತಂಕವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಸದ್ಯದ ವಿದ್ಯಮಾನ ಹಾಗೂ ಹಿಂದುತ್ವದ ಅಲೆ ಮುಸ್ಲಿಮರಲ್ಲಿ ಆತಂಕ ಮೂಡಿಸಿದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos