ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ಮುಖಾಮುಖಿ!

ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ಮುಖಾಮುಖಿ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಒಂದು ಹೆಸರಾಂತ ಕ್ರೀಡೆಯಾಗಿದೆ. ಈ ಕ್ರೀಡೆಯನ್ನು ಚಿಕ್ಕ ಮಕ್ಕಳಿಂದ ಹಾಗೂ ದೊಡ್ಡ ಮಕ್ಕಳು ಸಹ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. 4 ವರ್ಷಗಳ ಹಿಂದೆ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್‌ ಅನ್ನು ಹಿಂದಿಕ್ಕಿ ಇಂಗ್ಲೆಂಡ್‌ ವಿಶ್ವಕಪ್‌ ಟ್ರೋಫಿಗೆ ಮುತ್ತಿಟ್ಟ ಕ್ಷಣಗಳನ್ನು ಕ್ರಿಕೆಟ್‌ ಅಭಿಮಾನಿಗಳು ಇನ್ನೂ ಮರೆತಿಲ್ಲ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನೆದರ್‌ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್‌ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಏಷ್ಯಾಕಪ್‌ನಲ್ಲಿ ಗಾಯಗೊಂಡ ವೇಗಿ ನಸೀಂ ಶಾ ವಿಶ್ವಕಪ್ ನಿಂದಲೇ ಹೊರಬಿದ್ದಿದ್ದು ತಂಡಕ್ಕೆ ಹಿನ್ನಡೆ ಉಂಟು ಮಾಡಿದ್ದು, ಇನ್ನಿಬ್ಬರು ತಾರಾ ವೇಗಿಗಳಾದ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಕೂಡ ಸಂಪೂರ್ಣ ಫಿಟ್ ಇಲ್ಲ. ಏಷ್ಯಾಕಪ್‌ನ ಸೂಪರ್-4ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಪಾಕ್, ಅಭ್ಯಾಸ ಪಂದ್ಯಗಳಲ್ಲಿ ಹೀನಾಯ ಬೌಲಿಂಗ್ ಪ್ರದರ್ಶನ ನೀಡಿತ್ತು.
ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ345 ರನ್ ಗಳಿಸಿದ ಹೊರತಾಗಿಯೂ 6 ಓವರ್ ಬಾಕಿ ಇರುವಂತೆ ಸೋಲುಂಡಿತ್ತು. 2ನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 351 ರನ್ ಬಿಟ್ಟುಕೊಟ್ಟಿತ್ತು. ಪ್ರಮುಖವಾಗಿ ಕೊನೆಯ 20 ಓವರ್‌ಗಳಲ್ಲಿ ಪಾಕಿಸ್ತಾನಿ ಬೌಲರ್‌ಗಳು ಭಾರಿ ದುಬಾರಿಯಾಗುತ್ತಿದ್ದು, ಟೂರ್ನಿ ಸಾಗಿದಂತೆ ಬೌಲಿಂಗ್ ಸಮಸ್ಯೆಯೇ ಪಾಕಿಸ್ತಾನಕ್ಕೆ ಮಾರಕವಾಗಬಹುದು. ಇದರ ಜೊತೆಗೆ ಉಪನಾಯಕ ಶದಾಬ್ ಖಾನ್ ಲಯಕ್ಕೆ ಮರಳಲು ಪರದಾಡುತ್ತಿದ್ದಾರೆ.
ಬಾಬರ್ ಆಜಂ ಹಾಗೂ ಮೊಹಮದ್ ರಿಜ್ವಾನ್ ಉತ್ತಮ ಫಾರ್ಮ್‌ನಲ್ಲಿದ್ದು, ಇಫ್ತಿಕಾರ್ ಅಹ್ಮದ್ ಮೇಲೆ ತಂಡ ತಕ್ಕಮಟ್ಟಿಗೆ ನಿರೀಕ್ಷೆ ಇಟ್ಟುಕೊಳ್ಳಬಹುದು. ಮತ್ತೊಂದೆಡೆ ನೆದರ್‌ಲೆಂಡ್ಸ್ ಒಂದು ತಿಂಗಳ ಮೊದಲೇ ಭಾರತಕ್ಕೆ ಬಂದಿಳಿದರೂ, ತಂಡ ಇನ್ನಷ್ಟೇ ಯಶಸ್ಸು ಕಾಣಬೇಕಿದೆ. ಶಿಬಿರದ ವೇಳೆ ಕರ್ನಾಟಕಕ್ಕೆ ಶರಣಾಗಿದ್ದ ಡಚ್ ಪಡೆಯ ವಿಶ್ವಕಪ್ ಅಭ್ಯಾಸ ಪಂದ್ಯಗಳು ಮಳೆಗೆ ಬಲಿಯಾಗಿದ್ದವು. ತಂಡದಲ್ಲಿ ಕೆಲ ಹಿರಿಯ ಹಾಗೂ ಅನುಭವಿ ಆಟಗಾರರಿದ್ದು, ಪಾಕ್‌ಗೆ ಸೋಲುಣಿಸಿದರೆ ವಿಶ್ವಕಪ್‌ನ ಆರಂಭದಲ್ಲೇ ಅತಿ ರೋಚಕ ಫಲಿತಾಂಶವೊಂದಕ್ಕೆ ಸಾಕ್ಷಿಯಾದ ಹಿರಿಮೆ ನೆದರ್‌ಲೆಂಡ್ಸ್‌ಗೆ ಒಲಿಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos