ವಿಶ್ವಕಪ್: ಆಸೀಸ್ ಅಬ್ಬರಕ್ಕೆ ಪಾಕಿಸ್ತಾನ ಮಂಡಿಯೂರಿದೆ!

ವಿಶ್ವಕಪ್: ಆಸೀಸ್ ಅಬ್ಬರಕ್ಕೆ ಪಾಕಿಸ್ತಾನ ಮಂಡಿಯೂರಿದೆ!

ಬೆಂಗಳೂರು: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 20ನೇ ಪಂದ್ಯದಲ್ಲಿ ಆಸೀಸ್ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಈ ಪಂದ್ಯ ಅತ್ಯಂತ ರೋಚಕದಿಂದ ಕೂಡಿತ್ತು. ಏಕೆಂದರೆ ಈ ಪಂದ್ಯ ಇವರಿಬ್ಬರಿಗೂ ಬಹಳ ಮುಖ್ಯವಾದ ಪಂದ್ಯವಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸೀಸ್‌ ಬ್ಯಾಟಿಂಗ್‌ ಆರ್ಭಟದ ಮುಂದೆ ಪಾಕಿಸ್ತಾನ ಮಂಡಿಯೂರಿದೆ.

ಬ್ಯಾಟಿಂಗ್‌ ಪ್ರಾಬಲ್ಯದೊಂದಿಗೆ ಬೌಲಿಂಗ್‌ನಲ್ಲೂ ಮಿಂಚಿನ ನಿರ್ವಹನೆ ತೋರಿದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ತಂಡವನ್ನು 62 ರನ್‌ಗಳಿಂದ ಮಣಿಸಿದೆ. ಇದು ಪಾಕಿಸ್ತಾನ ತಂಡಕ್ಕೆ ವಿಶ್ವಕಪ್‌ ಟೂರ್ನಿಯಲ್ಲಿ ಸತತ 2ನೇ ಸೋಲು ಎನಿಸಿದೆ. ಇದಕ್ಕೂ ಮುನ್ನ ಭಾರತ ತಂಡದ ವಿರುದ್ಧ ಅಹಮದಾಬಾದ್‌ನಲ್ಲಿ ಸೋಲು ಕಂಡಿತ್ತು.ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗೆ 367 ರನ್‌ಗಳ ಬೃಹತ್‌ ಮೊತ್ತ ಪೇರಿಸಿದರೆ, ಪ್ರತಿಯಾಗಿ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ 45.3 ಓವರ್‌ಗಳಲ್ಲಿ 305 ರನ್‌ಗೆ ಆಲೌಟ್‌ ಆಗುವ ಮೂಲಕ ಟೂರ್ನಿಯಲ್ಲಿ 2ನೇ ಸೋಲು ಕಂಡಿತು. ಆಸೀಸ್‌ ಪರವಾಗಿ ಡೇವಿಡ್‌ ವಾರ್ನರ್‌ (163 ರನ್‌, 124 ಎಸೆತ, 14 ಬೌಂಡರಿ, 9 ಸಿಕ್ಸರ್‌) ಹಾಗೂ ಮಿಚೆಲ್‌ ಮಾರ್ಷ್‌ (121 ರನ್‌, 108 ಎಸೆತ, 10 ಬೌಂಡರಿ, 9 ಸಿಕ್ಸರ್‌) ಮೊದಲ ವಿಕೆಟ್‌ಗೆ 259 ರನ್‌ಗ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಬೃಹತ್‌ ಮೊತ್ತದ ಬುನಾದಿ ಹಾಕಿದ್ದರು.

ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡ ಸಲೀಸಾಗಿ 400ಕ್ಕಿಂತ ಅಧಿಕ ಮೊತ್ತ ಪೇರಿಸಲಿದೆ ಎನ್ನುವ ವಾತಾವರಣ ಇತ್ತಾದರೂ, ಕೊನೆಯ ಹಂತದಲ್ಲಿ ಶಹೀನ್‌ ಶಾ ಅಫ್ರಿಧಿ (54ಕ್ಕೆ 5) ಮಿಂಚಿನ ದಾಳಿ ನಡೆಸುವ ಮೂಲಕ ಸ್ಲಾಗ್‌ ಓವರ್‌ನಲ್ಲಿ ಆಸೀಸ್‌ ಬ್ಯಾಟಿಂಗ್‌ ಪ್ರಾಬಲ್ಯಕ್ಕೆ ಕಡಿವಾಣ ಹಾಕಿದರು. ಇದರಿಂದಾಗಿ ವಿಕೆಟ್‌ ನಷ್ಟವಿಲ್ಲದೆ 259 ರನ್‌ ಬಾರಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್‌ ಈ ಮೊತ್ತಕ್ಕೆ 108 ರನ್‌ ಸೇರಿಸುವ ವೇಳೆಗ ಉಳಿದ 10 ವಿಕೆಟ್‌ಗಳನ್ನು ಕಳೆದುಕೊಂಡಿತು.

ಫ್ರೆಶ್ ನ್ಯೂಸ್

Latest Posts

Featured Videos