ಪಾಕ್ ವಲಸಿಗರಿಗೆ ಭಾರತ ಪೌರತ್ವ

ಪಾಕ್ ವಲಸಿಗರಿಗೆ  ಭಾರತ ಪೌರತ್ವ

ಜೈಪುರ,ಜೂ.19 : ರಾಜಸ್ಥಾನದಲ್ಲಿ ಒಂದು ದಶಕಗಳಿಗೂ ಹೆಚ್ಚು ಕಾಲ ವಾಸವಾಗಿದ್ದ 34 ಪಾಕಿಸ್ತಾನಿ ವಲಸಿಗರಿಗೆ ಜೂನ್ ತಿಂಗಳಲ್ಲಿ ರಾಜಸ್ಥಾನ ಸರ್ಕಾರ ಭಾರತೀಯ ಪೌರತ್ವ ನೀಡಿದೆ.

ಬಾರ್ಮೇಡ್‌ನ 19, ಪಾಲಿಯ 10 ಮತ್ತು ಜಾಲೋರ್‌ನಲ್ಲಿ ನೆಲೆಸಿರುವ 5 ಜನರಿಗೆ ಈ ಪೌರತ್ವ ನೀಡಲಾಗಿದೆ.  2019 ಜ.1 ರಿಂದ ಜೂ.17ರವರೆಗೆ ಒಟ್ಟು 79 ಪಾಕ್ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ರಾಜೀವ್ ಸ್ವರೂಪ್ ತಿಳಿಸಿದ್ದಾರೆ.

ಇತ್ತೀಚಿಗೆ ಕೇಂದ್ರ ಸರ್ಕಾರ ನಾಗರೀಕ ಕಾಯ್ದೆಯಡಿ ಮುಸ್ಲಿಮೇತರ ವಲಸಿಗರಿಗೆ ಈ ಭಾರತೀಯ ಪೌರತ್ವ ನೀಡುವ ಕಾಯ್ದೆ ಜಾರಿಗೆ ತಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos