ಪಾಕ್ : ರೈಲು ಡಿಕ್ಕಿ 11 ಜನ ಸಾವು

ಪಾಕ್ : ರೈಲು ಡಿಕ್ಕಿ 11 ಜನ ಸಾವು

ಲಾಹೋರ್, ಜು. 11 : ಪಾಕಿಸ್ಥಾನ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿಂದು ವೇಗವಾಗಿ ಅಕ್ಬರ್ ಎಕ್ಸ್ಪ್ರೆಸ್ ಪ್ರಯಾಣಿಕರ ರೈಲು, ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಭೀಕರ ಅವಘಡದಲ್ಲಿ 11 ಮಂದಿ ಮೃತಪಟ್ಟು, 60 ಜನರು ಗಾಯಗೊಂಡರು. ಪೂರ್ವ ಪಂಜಾಬ್ ಪ್ರಾಂತ್ಯದ ಸಾದಿಕಾಬಾದ್ ತೆಹಶೀಲ್ ನ ವಾಲಹಾರ್ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಕ್ವೆಟ್ಟಾ ಕಡೆಗೆ ಹೋಗುತ್ತಿದ್ದ ಪ್ರಯಾಣಿಕರ ರೈಲು ಢಿಕ್ಕಿಯಾಯಿತು ಮೂಲಗಳಿಂದ ತಿಳಿದು ಬಂದಿದೆ.
ಮೃತರಲ್ಲಿ ಓರ್ವ ಮಹಿಳೆ ಮತ್ತು ಎಂಟು ಪುರುಷರು ಸೇರಿದ್ದಾರೆ; 9 ಮಹಿಳೆಯರು ಮತ್ತು 11 ಮಕ್ಕಳು ಗಾಯಾಳುಗಳಲ್ಲಿ ಸೇರಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ರಹೀಮ್ ಯಾರ್ ಖಾನ್ ಉಮರ್ ಸಲಾಮತ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos