ಪಂಜಾಬ್: ಪಾಕ್ ಗೂಢಚಾರ ಬಂಧನ

ಪಂಜಾಬ್: ಪಾಕ್ ಗೂಢಚಾರ ಬಂಧನ

ಫೆರೋಜ್‍ಪುರ್: ಪಂಜಾಬ್‍ನಲ್ಲಿ ಪಾಕಿಸ್ತಾನದ ಗೂಢಾಚಾರಿಯನ್ನು ಬಿಎಸ್‍ಎಫ್ ಯೋಧರು ಶುಕ್ರವಾರ ಬಂಧಿಸಿದ್ದಾರೆ.

ಇಲ್ಲಿನ ಮಾಬ್ಬೋ ಔಟ್‍ಪೋಸ್ಟ್ ಬಳಿ ಈತನನ್ನು ಸೆರೆ ಹಿಡಿದಿದ್ದು, ಮೊರದಾಬಾದ್ ಮೂಲದ ಮೊಹಮ್ಮದ್ ಶಾರುಖ್ (21) ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಬಿಎಸ್‍ಎಫ್ ಈತನ ಬಳಿಯಲ್ಲಿದ್ದ ಮೊಬೈಲ್ ಫೋನ್‍ನಲ್ಲಿ ಪಾಕಿಸ್ತಾನದ ಸಿಮ್ ಕಾರ್ಡ್ ವಶಪಡಿಸಿಕೊಂಡಿದೆ. ಈತ ಪಾಕಿಸ್ತಾನ ಮೂಲದ 6 ವಾಟ್ಸ್‌ಆಯಪ್ ಗ್ರೂಪ್‍ಗಳ ಸದಸ್ಯನಾಗಿದ್ದಾನೆ.

ಬೆಡ್ ಶೀಟೊಂದನ್ನು ಹೊದ್ದುಕೊಂಡಿದ್ದ ಈತ ಔಟ್ ಪೋಸ್ಟ್ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಬಿಎಸ್‍ಎಫ್ ಈತನನ್ನು ಸೆರೆ ಹಿಡಿದಿದೆ.

ಫ್ರೆಶ್ ನ್ಯೂಸ್

Latest Posts

Featured Videos