ಪಾಕ್ ಪ್ರಧಾನಿಯಿಂದ ಮೋದಿಗೆ ಅಭಿನಂದನೆ

ಪಾಕ್ ಪ್ರಧಾನಿಯಿಂದ ಮೋದಿಗೆ ಅಭಿನಂದನೆ

ನವದೆಹಲಿ, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಗೆ ಸಿಕ್ಕ ಭಾರಿ ಗೆಲುವಿಗೆ ಪಾಕಿಸ್ತಾನದಿಂದಲೂ ಅಭಿನಂದನೆ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಶುಭಾಶಯ ಕೋರಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡುವ ಮೂಲಕ ಮೋದಿಗೆ ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಬಿಜೆಪಿ ಹಾಗೂ ಮೈತ್ರಿಕೂಟದ ಗೆಲುವಿಗಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತಿದ್ದೇನೆ. ದಕ್ಷಿಣ ಏಷ್ಯಾದಲ್ಲಿ ಅವರೊಂದಿಗೆ ಶಾಂತಿ, ಅಭಿವೃದ್ಧಿ, ಏಳಿಗೆ ಕುರಿತು ಜೊತೆಯಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos