ಹಳೆ ಘಟನೆ ಹಂಚಿಕೊಂಡ ಪಾಕ್ ನಟಿ

ಹಳೆ ಘಟನೆ ಹಂಚಿಕೊಂಡ ಪಾಕ್ ನಟಿ

ಇಸ್ಲಾಮಾಬಾದ್, ಜು. 22: ಪಾಕಿಸ್ತಾನದ ಆಟಗಾರರೇ ನನ್ನ ಕಡೆ ಮುಖ ತಿರುಗಿಸಿ ಅಹಸ್ಯವಾಗಿ ಕಂಡರು ಆದರೆ ಅಲ್ಲೇ ಇದ್ದ ಎಂಎಸ್ ಧೋನಿ ಮಾತ್ರ ನನ್ನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡರು ಎಂದು ಪಾಕ್ ನಟಿಯೊಬ್ಬರು ಹಳೆಯ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
1998ರ ಏಷ್ಯಾಕಪ್ ವೇಳೆ ನಡೆದ ಘಟನೆಯೊಂದನ್ನು ಪಾಕ್ ನ ನಟಿ ಮತಿರಾ ಖಾನ್ ಹಂಚಿಕೊಂಡಿದ್ದಾರೆ. ಏಷ್ಯಾ ಕಪ್ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡ ತಂಗಿದ್ದ ಹೋಟೆಲಿನಲ್ಲೇ ಮತಿರಾ ಖಾನ್ ತಂಗಿದ್ದರು. ಈ ವೇಳೆ ಮತಿರಾ ಪಾಕ್ ಆಟಗಾರನ ಆಟೋಗ್ರಾಫ್ ಪಡೆಯಲು ಹೋಗಿದ್ದೆ.

ನಾನು ಪಾಕಿಸ್ತಾನ ಕ್ರಿಕೆಟಿಗರ ಬಳಿ ಆಟೋಗ್ರಾಫ್ ಕೇಳಲು ಹೋಗಿದ್ದೆ. ಈ ವೇಳೆ ಕೆಲ ಆಟಗಾರರು ನನಗೆ ಆಟೋಗ್ರಾಫ್ ನೀಡಿದ್ದರು. ಆದರೆ ಇನ್ನು ಕೆಲ ಆಟಗಾರರನ್ನು ಊಟ ಮಾಡುವುದಕ್ಕೂ ಬಿಡುವುದಿಲ್ಲ ಎಂದು ನನ್ನ ವಿರುದ್ಧ ರೇಗಿದ್ದರು.
ಇದರಿಂದ ನಾನು ಅಳುತಾ ಹೋಗುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಆಟಗಾರರೊಬ್ಬರು ನಾನು ಭಾರತ ತಂಡದ ಆಟಗಾರ ನನ್ನ ಬಳಿ ಆಟೋಗ್ರಾಫ್ ತೆಗೆದುಕೊಳ್ಳಲ್ವ ಎಂದು ಎಂದು ಧೋನಿ ಹೇಳಿದರು. ಅಲ್ಲದೆ ಆಟೋಗ್ರಾಫ್ ನೀಡಿದ್ದಲ್ಲದೆ ನನ್ನನ್ನು ತಮ್ಮ ಪಕ್ಕದಲ್ಲೇ ಮಾತನಾಡಿದ್ದರು ಎಂದು ಮತಿರಾ ಹೇಳಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos