ಪಾಕ್ ನ ಎಫ್ -16 ವಿಮಾನದ ಅವಶೇಷಗಳು ಪತ್ತೆ

ಪಾಕ್ ನ ಎಫ್ -16 ವಿಮಾನದ ಅವಶೇಷಗಳು ಪತ್ತೆ

ಶ್ರೀನಗರ, ಫೆ. 28, ನ್ಯೂಸ್ಎಕ್ಸ್ ಪ್ರೆಸ್:  ಭಾರತದ ಯುದ್ದ ವಿಮಾನಗಳು ಹೊಡೆದುರುಳಿಸಿದ ಪಾಕಿಸ್ತಾನದ ಎಫ್ -16 ವಿಮಾನದ ಅವಶೇಷಗಳು ಗಡಿ ನಿಯಂತ್ರಣಾ ರೇಖೆ ಬಳಿ ಪತ್ತೆಯಾಗಿವೆ.ಭಾರತದ ಗಡಿಯೊಳಗೆ ಪ್ರವೇಶಿಸಿದ್ದ ಎಫ್ -16 ವಿಮಾನವನ್ನು ರಜೌರಿ ಬಳಿ ಭಾರತದ ವಾಯು ಪಡೆಯ ಸುಖೋಯ್ ಯುದ್ಧ ವಿಮಾನ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಪಾಕಿಸ್ತಾನ ತನ್ನ ಯಾವುದೇ ವಿಮಾನಕ್ಕೂ ಹಾನಿಯಾಗಿಲ್ಲವೆಂದು ಸುಳ್ಳು ಹೇಳಿತ್ತು.

ಭಾರತದ ವಾಯು ಪಡೆಯ ವಿಮಾನಗಳು ಹೊಡೆದುರುಳಿಸಿದ ಪಾಕ್ ವಿಮಾನದ ಅವಶೇಷಗಳನ್ನು ಪಾಕಿಸ್ತಾನ ಸೇನಾ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಕಡುಸುಳ್ಳಿಗೆ ಇನ್ನೊಂದು ಸಾಕ್ಷ್ಯ ಪತ್ತೆಯಾಗಿದೆ

3 ದಿನಗಳಲ್ಲಿ ಪಾಕಿಸ್ತಾನ 20 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos