ಪಾಕ್ ಕೋಚ್ ‘ಮಿಕ್ಕಿ’ ಆತ್ಮಹತ್ಯೆ ಗೆ ಚಿಂತನೆ

ಪಾಕ್ ಕೋಚ್ ‘ಮಿಕ್ಕಿ’ ಆತ್ಮಹತ್ಯೆ ಗೆ ಚಿಂತನೆ

ಲಂಡನ್: ಪಾಕಿಸ್ತಾನ ತಂಡದ ಕೋಚ್ ಮಿಕ್ಕಿ ಅರ್ಥರ್ವಿ ಆತ್ಮಹತ್ಯೆಗೆ ಚಿಂತನೆ ನಡೆಸಿದ್ದೆ ಎಂಬ ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ. ಪಂದ್ಯದ ಬಳಿಕ ಮಾತನಾಡಿರುವ ಮಿಕ್ಕಿ, ಭಾರತ ಜೊತೆಗೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸೋಲಿನ ಬಳಿಕ ಕಳೆದ ಭಾನುವಾರ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಮಾಡಿದ್ದೆ. ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಮೇಲೆ ಸೋಲು ಸ್ವೀಕರಿಸುವುದು ಕಷ್ಟಸಾಧ್ಯವಾಗುತ್ತದೆ. ಜನರು ನಿರೀಕ್ಷೆ ಹಾಗೂ ಮಾಧ್ಯಮಗಳ ಒತ್ತಡದಿಂದ ಇಕ್ಕಟ್ಟಿಗೆ ಸಿಲುಕಿದ್ದೆ. ಈ ವೇಳೆ ಆತ್ಮಹತ್ಯೆ ಚಿಂತನೆ ಬಂದಿತ್ತು ಎಂದಿದ್ದಾರೆ. ಭಾರತ ವಿರುದ್ಧ ಪಂದ್ಯ ನಮಗೆ ಬಹಳ ಮುಖ್ಯ.ಜೂನ್ 16 ರಂದು ನಡೆದ ಪಾಕ್ ವಿರುದ್ಧ ಪಂದ್ಯದಲ್ಲಿ ಭಾರತ 89 ರನ್ ಗಳ ಜಯ ದೊರಕಿದೆ.

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿ ಫೈನಲ್ ಹಂತ ತಲುಪಬೇಕಾದರೆ ಉಳಿರುವ 3 ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಅಲ್ಲದೇ ಪಾಕ್ ರನ್ ರೇಟ್ ಕೂಡ ಇದರ ಮೇಲೆ ಪ್ರಾಮುಖ್ಯತೆ ಪಡೆದಿದೆ. ಪಾಕಿಸ್ತಾನ ತಂಡ ನಾಳಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos