ಪದ್ಮಾವತಿ ಸುರೇಶ್ ಸ್ಪೋಟಕ‌ ಹೇಳಿಕೆ 

ಪದ್ಮಾವತಿ ಸುರೇಶ್ ಸ್ಪೋಟಕ‌ ಹೇಳಿಕೆ 

ಹೊಸಕೋಟೆ, ನ. 21: ಓಟನ್ನು ಗಿಟ್ಟಿಸಿಕೊಳ್ಳಲು ಹೊಸಕೊಟೆ ವಿಧಾನಸಭಾ ಕ್ಷೇತ್ರದಲ್ಲಿ ನಿತ್ಯ ಒಂದಲ್ಲ ಒಂದು ಹೊಸ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ. ಆಡಳಿತ ಹಾಗೂ ವಿಪಕ್ಷದ ನಾಯಕರು ಮಾತಿಗೆ ಎದುರು ಮಾತುಗಳನ್ನು ಆಡುವ ಮೂಲಕ ನಾವೇ ಈ ಭಾರಿ ಕದನದಲ್ಲಿ ಗೆದ್ದು ಬೀಗುತ್ತೇವೆಂಬ ಛಲದ ಮಾತುಗಳು ಅವರ ಬಾಯಿಂದಲೇ ಬರುತ್ತಿವೆ.

ಹೈವೋಲ್ಟೇಜ್ ಕ್ಷೇತ್ರವಾದ, ಕಾದು ಕೆಂಡದಂತಿರುವ ಬೆಂಗಳೂರು ಗ್ರಾಮಾಂತರ ಉಪಕದನದಲ್ಲಿ ಗೆಲ್ಲುವ ಸಲುವಾಗಿ ಯಾರನ್ನು ಬೇಕಾದರುಯ ಶತೃಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ನಮ್ಮ ರಾಜಕೀಯ ನಾಯಕರು. 3 ರಾಷ್ಟ್ರೀಯ ಪಕ್ಷಗಳು ಹಾಗೂ ಪಕ್ಷೇತರರು ಜಿದ್ದಾಜಿದ್ದಿನ ಅಕಾಡದಲ್ಲಿ ದುಮ್ಮಿಕ್ಕಿದ್ದು, ಒಬ್ಬರಿಗೊಬ್ಬರು ಪೈಪೋಟಿ ಎಂಬಂತೆ ಸವಾಲುಗಳನ್ನು ಎಸೆದುಕೊಂಡು ಮುಖವನ್ನು ಕೆಂಡದಂತೆ ಮಾಡಿಕೊಂಡು ಒಳಗೊಳಗೆ ಕತ್ತಿ ಮಸೆಯುತ್ತಿದ್ದಾರೆ.

ಒಂದು ಕಡೆ ಎಂಟಿಬಿ ನಾಗರಾಜು ಪ್ರಭಲವಾಗಿ ಬಿಜೆಪಿಯಿಂದ ಸ್ಪರ್ಧೆ ಒಡ್ಡಿದರೆ ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮಾವತಿ ಸುರೇಶ್ ಅವರು ಈ ಭಾರಿ ಉಪಕದನಲ್ಲಿ ತಮ್ಮ ತಾಕತ್ತು ತೋರಿಸಲು ಮುಂದಾಗಿದ್ದಾರೆ. ಈ ಚುನಾವಣೆಯಲ್ಲಿ ನಾನು(ಪದ್ಮಾವತಿ ಸುರೇಶ್ ) ಗೆಲ್ಲುವುದರೊಂದಿಗೆ ಆಡಳಿತಾರೂಢ ಸರ್ಕಾರ ಬಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದರಲ್ಲಿ ಡೌಟೇ ಇಲ್ಲ ಎಂದು ಕೈ ಅಭ್ಯರ್ಥಿ ಪದ್ಮಾವತಿ ಸುರೇಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಎಂಟಿಬಿಗೆ ಮತಹಾಕಿ ಗೆಲ್ಲಿಸಿದರೆ ಬಿಜೆಪಿಯಿಂದ ಮಂತ್ರಿಯಾಗಬಹುದು, ಆದರೆ ಮತದಾರರೆ ನನಗೆ ಓಟು ಹಾಕಿ ಗೆಲ್ಲಿಸಿದರೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಬೇಕೋ? ಅಥವಾ ಎಂಟಿಬಿ ನಾಗರಾಜು ಸಚಿವರಾಗಬೇಕೋ ನೀವೆ ಯೋಚಿಸಿ. ನನ್ನ ಗೆಲುವಿನೊಂದಿಗೆ ಬಿಜೆಪಿ ಪತನವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬೆಂಗಳೂರು ಮಾಧರಿಯಲ್ಲಿಯೇ ಹೊಸಕೋಟೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಮತದಾರರಲ್ಲಿ ಅಭಿವೃದ್ಧಿಯ ಮಂತ್ರವನ್ನು ಪದ್ಮಾವತಿ ಜಪಿಸಿದರು.

ಸಿದ್ದರಾಮಯ್ಯರ ಕೊಡುಗೆ ಈ ಕ್ಷೇತ್ರಕ್ಕೆ ಅಪಾರವಾಗಿದೆ. ಅವರನ್ನು ಮುಂದಿಟ್ಟುಕೊಂಡೇ ನಾವು ಓಟ್ ಕೇಳಲು ಮುಂದಾಗಿದ್ದೇವೆ. ಸಿದ್ದಾರಾಮಯ್ಯ ಸೇರಿದಂತೆ ಇತರ ನಾಯಕರು ಹೊಸಕೋಟೆಯಲ್ಲಿ ಮತ ಬೇಟೆಗೆ ಇಳಿದಿದ್ದಾರೆ. ಇದು ಬೇಕಾಬಿಟ್ಟಿ ಮಾತಲ್ಲ ನನ್ನನ್ನು ಗೆಲ್ಲಿಸಿಕೊಂಡು ಬರಲು ಹೊರಟಿದ್ದಾರೆಂಬ ಆಶಾಭಾವನೆಯಿಂದ ಪದ್ಮಾವತಿ ಭವಿಷ್ಯ ನುಡಿದಿದ್ಧಾರೆ.

 

ಫ್ರೆಶ್ ನ್ಯೂಸ್

Latest Posts

Featured Videos