ಸಾಲುಮರದ ತಿಮ್ಮಕ್ಕ ಸೇರಿ 47 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ಸಾಲುಮರದ ತಿಮ್ಮಕ್ಕ ಸೇರಿ 47 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ನವದೆಹಲಿ, ಮಾ.11, ನ್ಯೂಸ್ ಎಕ್ಸ್ ಪ್ರೆಸ್: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಇಂದು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

ದೆಹಲಿಯ ರಾಷ್ಟ್ರಪತಿ ಭವನದ ಯಲ್ಲಿಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಖ್ಯಾತ ಚಿತ್ರನಟ ಮೋಹನ್ ಲಾಲ್, ಖ್ಯಾತ ಕೊರಿಯೊಗ್ರಫರ್, ಚಿತ್ರನಟ ಪ್ರಭುದೇವ, ಖ್ಯಾತ ಸಂಗೀತಗಾರ ಶಂಕರ್ ಮಹದೇವನ್, ಅಕಾಲಿ ದಳ ನಾಯಕ ಸುಖದೇವ್ ಸಿಂಗ್ ದಿನ್ಡ್ಸಾ, ಕುಸ್ತಿಪಟು ಬಜ್ ರಂಗ್ ಪುನಿಯಾ, ಭಾಗೀರತಿ ದೇವಿ, ಸಿಸ್ಕೊ ಸಿಸ್ಟಮ್ಸ್ ನ ಮಾಜಿ ಸಿಇಒ ಜಾನ್ ಚೇಂಬರ್ಸ್ ಸೇರಿದಂತೆ ಒಟ್ಟು 47 ಗಣ್ಯರಿಗೆ ಪದ್ಮಭೂಷಣ, ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಬಿಹಾರದ ನಾಯಕ ಹುಕುಂದೇವ್ ನಾರಾಯಣ ಯಾದವ್, ಸಿಸ್ಕೋ ಸಿಸ್ಟಮ್ ಮಾಜಿ ಸಿಇಒ ಜಾನ್ ಚೇಂಬರ್ಸ್ , ನೃತ್ಯ ನಿರ್ದೇಶಕ-ನಟ ಪ್ರಭುದೇವ, ಸಾಲಮರದ ತಿಮ್ಮಕ್ಕ ಮೊದಲಾದವರು ಪ್ರಶಸ್ತಿ ಪಡೆದ ಪ್ರಮುಖರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದರು.

ಖ್ಯಾತ ಪತ್ರಿಕೋದ್ಯಮಿ ಕುಲದೀಪ್ ನಾಯರ್ ಅವರಿಗೆ ಮರಣೋತ್ತರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಣರಾಜ್ಯೋತ್ಸವ ಸಮಾರಂಭದ ದಿನ ಪ್ರಶಸ್ತಿಗಳು ಘೋಷಣೆಯಾಗಿದ್ದವು, ಘೋಷಣೆಯಾದ 112 ಮಂದಿಯಲ್ಲಿ 56 ಗಣ್ಯರಿಗೆ ಇಂದು ಪ್ರಶಸ್ತಿ ನೀಡಲಾಗಿದ್ದು ಉಳಿದ 56 ಮಂದಿಗೆ ಇದೇ ತಿಂಗಳ 16ರಂದು ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos