ದರದಲ್ಲಿ ದಾಖಲೆ ಸೃಷ್ಠಿಸಿದ ಭತ್ತ!!

ದರದಲ್ಲಿ ದಾಖಲೆ ಸೃಷ್ಠಿಸಿದ ಭತ್ತ!!

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮಳೆ ಇಲ್ಲದೇ ರೈತರೆಲ್ಲಾ ಕಂಗಾಲಾಗಿದ್ದಾರು. ಇದರಿಂದ ದಿನ ನಿತ್ಯ ಬಳಸುವ ವಸ್ತುಗಳ ದರದಲ್ಲಿ ಏರೀಕೆಯಾಗಿತ್ತು. ದೇಶಕ್ಕೆ ಅನ್ನ ಕೊಡುವ ಅನ್ನದಾತರು ಬೆಳೆದ ಮುಖ್ಯ ಆಹಾರ ಬೆಳೆಯಾದ ಭತ್ತಕ್ಕೆ ಉತ್ತಮ ಧಾರಣೆ ಏರಲೇಬೇಕಾಗಿದ್ದು ಅನಿವಾರ್ಯವಾಗಿದೆ. ಹಲವು ದಶಕಗಳಿಂದ ಬತ್ತ ಬೆಳೆಯುವ ರೈತರು ಕಾಯುತ್ತಿದ್ದ ಭತ್ತದ ಧಾರಣೆ ಈ ವರ್ಷ ಏರಿಕೆಯಾಗಿದ್ದು ಸಂತಸ ತಂದಿದೆ ಎನ್ನುತ್ತಾರೆ.

ಗದ್ದೆ ಕಟಾವು ಸಮಯದಲ್ಲೇ ಬತ್ತದ ಬೆಲೆ 1 ಕ್ವಿಂಟಾಲ್‌ ಗೆ 3 ಸಾವಿರ ಧಾರಣೆ ಕಂಡಿದ್ದು ಭತ್ತ ಬೆಳೆಯುವ ರೈತರು ಪುಲ್ ಖುಷಿಯಾಗಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ 1 ಕ್ವಿಂಟಾಲ್‌ ಬತ್ತದ ಬೆಲೆ 1500 ರಿಂದ 1600 ರೂ ಇತ್ತು. ಈ ವರ್ಷ ಆಗಸ್ಟ್‌ ತಿಂಗಳಿಂದ ಭತ್ತದ ಬೆಲೆ ಏರಿಕೆಯಾಗುತ್ತಾ ಡಿಸೆಂಬರ್ ತಿಂಗಳಲ್ಲಿ 1 ಕ್ವಿಂಟಾಲ್‌ ಗೆ 3 ಸಾವಿರ ರು. ಏರಿಕೆಯಾಗಿ ದಾಖಲೆ ಸೃಷ್ಠಿಸಿದೆ.

ನರಸಿಂಹರಾಜಪುರ ತಾಲೂಕು ಒಂದು ಕಾಲದಲ್ಲಿ ಬಹುತೇಕ ರೈತರು ಭತ್ತ ಮಾತ್ರ ಬೆಳೆಯುತ್ತಿದ್ದರಿಂದ ಭತ್ತದ ಕಣಜ ಎಂದು ಪ್ರಸಿದ್ದಿ ಪಡೆದಿತ್ತು. ತಾಲೂಕಿನಲ್ಲಿ ಅಂದಾಜು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದರು. ಆದರೆ, 20 – 30 ವರ್ಷದ ಹಿಂದಕ್ಕೆ ಹೋದರೆ ಭತ್ತವನ್ನು ಯಾರೂ ಕೇಳುವುವರೇ ಇಲ್ಲವಾಗಿತ್ತು. ಬತ್ತದ ಧಾರಣೆ 1 ಕ್ವಿಂಟಾಲ್ ಗೆ 700-800 ರು.ಗೆ ಕೇಳುತ್ತಿದ್ದರು. ಕೆಲವು ವರ್ಷದಲ್ಲಿ 1200 ರು.ನಿಂದ 1300 ರು, ಗೆ ಮಾತ್ರ ಖರೀದಿ ಮಾಡುತ್ತಿದ್ದರು. ಆದರೆ, ಭತ್ತ ಬೆಳೆಯಲು ಕೂಲಿಕಾರರಿಗೆ ಸಂಬಳ ನೀಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಭತ್ತ ಬೆಳೆಯುವ ರೈತರು ಸಾಲದ ಹೊರೆಯಲ್ಲೇ ಕಾಲ ಕಳೆಯುತ್ತಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos