ಊಟಕ್ಕೆ ಹೋಗ್ತಾ ಇದ್ದೀರಾ?

ಊಟಕ್ಕೆ ಹೋಗ್ತಾ ಇದ್ದೀರಾ?

ವಾಷಿಂಗ್ಟನ್, ಅ. 14 : ಹೊಟೇಲಲ್ಲೋ, ರೆಸ್ಟೋರೆಂಟಲ್ಲೋ,ಸಮಾರಂಭದಲ್ಲೋ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಊಟಕ್ಕೆ ಕೂತಾಗ  ಊಟಕ್ಕೆ ಕುಳಿತಾಗ ಒಂದು ಪಟ್ಟು ಜಾಸ್ತಿ ಆಹಾರ ಸೇವನೆ ಮಾಡುತ್ತಾರೆ ಎಂದು ವಾಷಿಂಗ್ಟನ್ ಮೂಲದ ಸಂಶೋಧನ ಕೇಂದ್ರದ ವರದಿಯೊಂದರಿಂದ ಬಹಿರಂಗವಾಗಿದೆ.
ತಮ್ಮ ಆಪ್ತರ ಗುಂಪಿನಲ್ಲಿ ಆಹಾರ ಸೇವಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಮಾಮೂಲಿಗಿಂತ ಶೇ.48 ರಷ್ಟು ಹೆಚ್ಚು ಆಹಾರವನ್ನು ಸೇವಿಸುತ್ತಾರೆ ಎಂಬ ಕುತೂಹಲಕಾರಿ ಅಂಶ ಈ ವರದಿಯಲ್ಲಿದೆ. ಇನ್ನು, ಮಹಿಳೆಯರು ತಾವು ಒಬ್ಬರೇ ಆಹಾರ ಸೇವಿಸುವಾಗ ಆ ಪ್ರಮಾಣಕ್ಕಿಂತ ಗೆಳತಿಯರ ಅಥವಾ ಕುಟುಂಬದವರ ಗುಂಪಿನಲ್ಲಿದ್ದಾಗ ಮಾಮೂಲಿಗಿಂತ ಶೇ.29 ರಷ್ಟು ಹೆಚ್ಚು ಆಹಾರವನ್ನು ಸೇವಿಸುತ್ತಾರಂತೆ!

ಫ್ರೆಶ್ ನ್ಯೂಸ್

Latest Posts

Featured Videos