ಕಿತ್ತಳೆ ಹಣ್ಣಿನ ಸಿಪ್ಪೆ; ಏನೇನು ಪ್ರಯೋಜನ?

ಕಿತ್ತಳೆ ಹಣ್ಣಿನ ಸಿಪ್ಪೆ; ಏನೇನು ಪ್ರಯೋಜನ?

ನ್ಯೂಸ್ ಎಕ್ಸ್ ಪ್ರೆಸ್, ಮಾ.7: ಕಿತ್ತಳೆ ಹಣ್ಣು ಚಳಿಗಾಲಕ್ಕೆ ಅತ್ಯುತ್ತಮವಾದ ಹಣ್ಣಾಗಿದೆ. ಇದನ್ನು ಸೇವನೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಾವು ಕಿತ್ತಳೆ ಹಣ್ಣು ತಿಂದ ಮೇಲೆ ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿರುವ ಹಲವಾರು ಅಂಶಗಳು ನಿಮ್ಮ ಸೌಂದರ್ಯ ಮತ್ತು ಅರೋಗ್ಯ ಉತ್ತಮವಾಗಿರಲು ಸಹಾಯ ಮಾಡುತ್ತವೆ.

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದನ್ನು ಮೊಸರಿನಲ್ಲಿ ಮಿಶ್ರಣ ಮಾಡಿ ಅರ್ಧ ಚಮಚ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಮುಖವನ್ನು ತೊಳೆದರೆ ಮುಖದಲ್ಲಿ ಕಪ್ಪುಕಲೆ, ಮೊಡವೆ ಈ ರೀತಿಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಕಿತ್ತಳೆ ಸಿಪ್ಪೆಯನ್ನು ಪೇಸ್ಟ್ ಮಾಡಿ ಓಟ್ಸ್ ಮತ್ತು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಸ್ಕ್ರಬ್ ಮಾಡಿದರೆ ಬ್ಲಾಕ್ ಹೆಡ್ಸ್ ನಿವಾರಣೆಯಾಗುತ್ತದೆ.

ಕಿತ್ತಳೆ ಸಿಪ್ಪೆ ಮತ್ತು ನಿಂಬೆ ರಸವನ್ನು ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಂಡರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

ಕಿತ್ತಳೆ ಸಿಪ್ಪೆಯನ್ನು ತಿಂದರೆ ಚರ್ಮದ ಹಾಗೂ ಶ್ವಾಸಕೋಶದ ಕ್ಯಾನ್ಸರ್ ತಗಲುವುದಿಲ್ಲ.

ಕಿತ್ತಳೆ ಸಿಪ್ಪೆಯನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಕೂದಲು ಮತ್ತು ನೆತ್ತಿಗೆ ಹಚ್ಚಿಕೊಲ್ಳುವುದರಿಂದ ಕೂದಲು ಸ್ವಚ್ಛವಾಗುತ್ತದೆ.

ಪಿಂಪಲ್ ಸಮಸ್ಯೆ ಉದ್ದರೆ ಕಿತ್ತಳೆ ಸಿಪ್ಪೆಯನ್ನು ಲೋಳೆಸರದ ರಸದಲ್ಲಿ ಅರೆದು ಮುಖಕ್ಕೆ ಲೇಪಿಸಬೇಕು.

ಕಿತ್ತಳೆ ಸಿಪ್ಪೆ ಮತ್ತು ಲಿಂಬೆ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಸೋಸಿ ಸ್ವಲ್ಪ ಜೇನು, ಏಲಕ್ಕಿ ಸೇರಿಸಿ ದಿನನಿತ್ಯ ಕುಡಿದರೆ ಆರೋಗ್ಯಕ್ಕೆ ಉತ್ತಮ.

ಕಿತ್ತಳೆ ಸಿಪ್ಪೆಯನ್ನು ಕಷಾಯ ಮಾಡಿ ಇದಕ್ಕೆ ಸ್ವಲ್ಪ ಜೇನನ್ನು ಸೇರಿಸಿ ದಿನನಿತ್ಯ ಎರಡು ಬಾರಿ ಕುಡಿದರೆ ರಕ್ತದೊತ್ತಡ ನಿವಾರಣೆಯಾಗುತ್ತದೆ.

ಬಾಯಿಯಿಂದ ದುರ್ವಾಸನೆ ಬರುತ್ತಿದ್ದಲ್ಲಿ ಕಿತ್ತಳೆ ಸಿಪ್ಪೆಯನ್ನು ಕಲ್ಲುಸಕ್ಕರೆಯೊಂದಿಗೆ ಬೆರಸಿ ಜಗಿಯಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos