ಕುರಿ, ಕೋಳಿ, ಹಸು ಸಾಲಕ್ಕೆ ಆಧ್ಯತೆ

ಕುರಿ, ಕೋಳಿ, ಹಸು ಸಾಲಕ್ಕೆ ಆಧ್ಯತೆ

ಕೋಲಾರ: ಕೋವಿಡ್ ಹಿನ್ನಲೆಯಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗಳಿಗೆ ವಾಪಸ್ಸಾಗಿರುವ ಯುವಕರಿಗೆ ಹೊಸ ಚೈತನ್ಯ ತುಂಬಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕೋಳಿ, ಕುರಿ, ಹಂದಿ, ಹಸು, ರೇಷ್ಮೆಹುಳು ಸಾಕಾಣೆಗೆ ಮಧ್ಯಮಾವಧಿ ಸಾಲ ವಿತರಣೆ ಬ್ಯಾಂಕಿನ ಮೊದಲ ಆದ್ಯತೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಸೋಮವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಕೋವಿಡ್‌ನಿಂದಾಗಿ ಅನೇಕ ಉದ್ಯಮಗಳಿಗೆ ಆರ್ಥಿಕವಾಗಿ ಪೆಟ್ಟು ಬಿದ್ದಿದ್ದು, ಕೃಷಿ ಒಂದೇ ಇಂದು ನೆಮ್ಮದಿಯ ಬದುಕಿಗೆ ಆಸರೆಯಾಗಿ ನಿಂತಿದೆ, ಈ ಹಿನ್ನಲೆಯಲ್ಲಿ ಹಳ್ಳಿಗಳಿಗೆ ವಾಪಸ್ಸಾಗಿ ನಿರುದ್ಯೋಗಿಗಳಾಗಿರುವ ಯುವಕರಿಗೆ ಬದುಕು ಕಟ್ಟಿಕೊಳ್ಳಲು ಬ್ಯಾಂಕ್ ನೆರವಾಗಲು ಬದ್ದತೆ ಹೊಂದಿದೆ ಎಂದರು.

ಡಿಸಿಸಿ ಬ್ಯಾಂಕ್ ಠೇವಣಿ ಸಂಗ್ರಹದಲ್ಲಿ ಮಾತ್ರ ಗುರಿ ತಲುಪಿಲ್ಲ, ಉಳಿದಂತೆ ಎಲ್ಲಾ ಆಯಾಮಗಳಲ್ಲೂ ಅತ್ಯಂತ ಉತ್ತಮ ಸ್ಥಾನ ಪಡೆದಿದೆ, ಸಿಬ್ಬಂದಿ ಠೇವಣಿ ದುಪ್ಪಟ್ಟು ಮಾಡಲು ಇಚ್ಚಾಶಕ್ತಿಯಿಂದ ನಿಮ್ಮ ಬ್ಯಾಂಕ್ ಎಂಬ ಭಾವನೆಯಿಂದ ಕೆಲಸ ಮಾಡಿ, ನಬಾರ್ಡ್ನ ಠೇವಣಿ ಸಂಗ್ರಹ ಗುರಿ ಸಾಧಿಸಲು ಪಣ ತೊಡಿ ಎಂದು ಕಿವಿಮಾತು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos